ಗ್ಯಾಸ್ ಪೂರೈಕೆ ಇಲ್ಲದ ಸಂಕಷ್ಟ: ಹೋಟೆಲ್ ಉದ್ಯಮ ಮತ್ತೆ ಸಂಕಟದಲ್ಲಿ

ಮಧ್ಯಪ್ರಾಚ್ಯದ ಸಂಘರ್ಷದಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಹೋಟೆಲ್ ಉದ್ಯಮಕ್ಕೆ ಕರ್ನಾಟಕ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ (LPG) ಪೂರೈಕೆ ಇಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ. ತೈಲ ಪೂರೈಕೆ ಕಂಪನಿಗಳೊಂದಿಗೆ ಇಂದು ನಡೆದ ಮಹತ್ವದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ ಅವರು, “ಸಿಎಂ ಎರಡನೇ ಪತ್ರವನ್ನು ಬರೆಯುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಗಮನ ನೀಡಬೇಕು. ಇಂದು ಕಾರ್ಯದರ್ಶಿ, ಆಯುಕ್ತರು ಹಾಗೂ ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ,” ಎಂದು ತಿಳಿಸಿದ್ದಾರೆ.

ಗ್ಯಾಸ್ ಡಬಲ್ ಬುಕ್ಕಿಂಗ್ ಬೇಡ. ಮಿತವ್ಯಯದಲ್ಲಿ ಬಳಕೆ ಮಾಡಿ. ಹಡಗುಗಳ ಮೂವ್‌ಮೆಂಟ್ ಆರಂಭವಾಗಿದೆ. ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್, ರೈಲ್ವೆ ಕ್ಯಾಂಟೀನ್‌ಗಳಿಗೆ 100% ರಷ್ಟು ಸಿಲಿಂಡರ್ ನೀಡಲು ಒಪ್ಪಿಗೆ ನೀಡಲಾಗಿದೆ. ಆರೂವರೆ ಸಾವಿರ ಸಿಲಿಂಡರ್ ಗಳ ಪ್ರತಿದಿನ ಖರ್ಚಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಇದರಲ್ಲಿ 4200 ಸಿಲಿಂಡರ್ ಎಸೆನ್ಸಿಯಲ್ ವಲಯಕ್ಕೆ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಇಂದಿರಾ ಕ್ಯಾಂಟೀನ್‌ಗಳಿಗೆ 4200+1200, ಎಸೆನ್ಸಿಯಲ್ ಸರ್ವಿಸ್ ವಲಯಕ್ಕೆ 5200 ಪೂರೈಕೆ, 2250 ಸಿಲಿಂಡರ್‌ಗಳು ಆಟೋಗಳಿಗೆ ಪೂರೈಕೆ ಮಾಡಲಾಗ್ತಿದೆ. ಹೊಟೇಲ್‌ಗಳಿಗೆ ಸದ್ಯಕ್ಕೆ ಪೂರೈಕೆ ಆಗಲ್ಲ. ಎಲೆಕ್ಟ್ರಿಕ್ ಸ್ಟವ್ ಬಳಕೆ ಮಾಡುವಂತೆ ಸಚಿವರು ಮನವಿ ಮಾಡಿದರು. 1 ಸಾವಿರ ಸಿಲಿಂಡರ್ ಒಂದು ದಿನಕ್ಕೆ ಪೂರೈಕೆ ಮಾಡಲಾಗುವುದು. ಇದರಲ್ಲಿ ಹೋಟೆಲ್ ಅಸೋಸಿಯೇಷನ್ ಕೂಡ ಇದೆ. ಹೋಟೆಲ್ ಸರ್ವಿಸರ್‌ಗಳ ಬಳಕೆಗೆಯಾದ್ರೂ ಸಿಲಿಂಡರ್ ಬೇಕಾಗುತ್ತೆ. ರಾಜ್ಯದಲ್ಲಿ 44 ಸಾವಿರ ಸಿಲಿಂಡರ್‌ಗಳು ಹೊಟೇಲ್‌ಗಳಿಗೆ ಪೂರೈಕೆ ಆಗ್ತಿತ್ತು ಎಂದು ವಿವರಿಸಿದರು.