ಟಾಕ್ಸಿಕ್ ಟೀಸರ್ ಸದ್ದು: ವಿಂಟೇಜ್ ಯಶ್ ಲುಕ್ ಮತ್ತೆ ಮೆರೆದಿತು

ಟಾಕ್ಸಿಕ್ ಟೀಸರ್‌ನ ಡೈಲಾಗ್‌ಗಳು ಅಭಿಮಾನಿಗಳ ಹೃದಯ ಗೆದ್ದಿವೆ. ‘ಹಠ ಬಿಟ್ಟುಬಿಡು’ ಎಂಬ ಪ್ರಶ್ನೆಗೆ ಯಶ್ ನೀಡುವ ಗಟ್ಟಿಯಾದ ಉತ್ತರ ‘ಅದು ಸಾಧ್ಯವೇ ಇಲ್ಲ’ ಎಂಬ ಮಾತು ಅವರ ವ್ಯಕ್ತಿತ್ವವನ್ನೇ ಪ್ರತಿಬಿಂಬಿಸುವಂತಿದೆ. ಈ ಡೈಲಾಗ್‌ ಯಶ್ ಅವರ ಹುಟ್ಟುಗುಣಕ್ಕೆ ಹೋಲುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದು, ಈ ಕಾರಣದಿಂದಲೂ ಟೀಸರ್ ಹೆಚ್ಚು ಮೆಚ್ಚುಗೆ ಪಡೆದಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಈ ಟೀಸರ್ ಲಕ್ಷ ಲಕ್ಷ ವೀಕ್ಷಣೆ ಕಾಣುತ್ತಿದೆ. ಯಶ್ ಅಭಿಮಾನಿಗಳಂತೂ ಹಬ್ಬ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಟೀಸರ್ ನೋಡಿ ರಾಕಿಂಗ್ ಸ್ಟಾರ್ಸ್ ಫ್ಯಾನ್ಸ್ ಖುಷ್ ಆಗಿದ್ದಾರೆ. ‘ವಿಂಟೇಜ್ ಯಶ್ ಮರಳಿದ’ ಎಂದು ಸಂಭ್ರಮಿಸುತ್ತಿದ್ದಾರೆ. ಹಾಗಾದರೆ, ಯಶ್ ಅಭಿಮಾನಿಗಳಿಗೆ ಇಷ್ಟ ಆದ ಅಂಶಗಳು ಯಾವವು? ಆ ಬಗ್ಗೆ ಇಲ್ಲಿದೆ ವಿವರ.

‘ಟಾಕ್ಸಿಕ್’ ಟೀಸರ್​​ನಲ್ಲಿ ಬರೋ ಡೈಲಾಗ್​​ಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ‘ಹಠ ಬಿಟ್ಟುಬಿಡು’ ಎಂದು ಹೇಳಿದಾಗ ಅದು ಸಾಧ್ಯವೇ ಇಲ್ಲ ಎಂದು ಯಶ್ ಹೇಳುತ್ತಾರೆ. ಯಶ್ ಅವರು ಹುಟ್ಟುಗುಣ ಇದು. ಈ ಗುಣಕ್ಕೆ ಹೋಲಿಕೆ ಆಗುತ್ತದೆ ಎಂದು ಅನೇಕರು ಹೇಳಿದ್ದಾರೆ. ಈ ಕಾರಣದಿಂದಲೂ ಟೀಸರ್ ಇಷ್ಟ ಆಗಿದೆ.

‘ಟಾಕ್ಸಿಕ್’ ಟೀಸರ್​​ನಲ್ಲಿ ರಕ್ತವನ್ನು ಹೆಚ್ಚೇ ತೋರಿಸಲಾಗಿದೆ. ಇದು ಕೆಲವರಿಗೆ ಇಷ್ಟ ಆಗಿಲ್ಲ. ಈ ಬಗ್ಗೆ ಕೊಂಕು ತೆಗೆದಿದ್ದಾರೆ. ಈ ರೀತಿ ಕೊಂಕು ತೆಗೆಯೋ ಎಲ್ಲರಿಗೂ ಯಶ್ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ.