ಭಟ್ಕಳದ ಮಾಸ್ತಪ್ಪ ನಾಯ್ಕ ಬಲ್ಲೇ ಅವರಿಗೆ ‘ಭಾರತದ ಕೈಗಾರಿಕಾ ಐಕಾನ್ ಪ್ರಶಸ್ತಿ–2026’ ಗೌರವ

ಭಟ್ಕಳ:

ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕ ಮಾಸ್ತಪ್ಪ ನಾಯ್ಕ ಬಲ್ಲೇ ಅವರು ಭಾರತದ “ಕೈಗಾರಿಕಾ ಐಕಾನ್ ಪ್ರಶಸ್ತಿ-2026″ಗೆ ಭಾಜನರಾಗಿರುವುದು ತಾಲೂಕು, ಜಿಲ್ಲೆಯಷ್ಟೇ ಅಲ್ಲ, ಸಂಪೂರ್ಣ ರಾಜ್ಯಕ್ಕೆ ಗೌರವದ ವಿಚಾರವಾಗಿದೆ ಎಂದು ಅಭಿಮಾನಿಗಳು ಅಭಿನಂದಿಸಿದ್ದಾರೆ.

“ಭಾರತದ ಕೈಗಾರಿಕಾ ಐಕಾನ್ ಪ್ರಶಸ್ತಿ 2026” 2 ಪ್ರತಿಷ್ಠಿತ ಗೌರವವು ದೇಶದಾದ್ಯಂತ ಉದ್ಯಮ, ನವೀನತೆ, ಸಾಮಾಜಿಕ ಜವಾಬ್ದಾರಿ ಹಾಗೂ ಯುವಶಕ್ತಿಯನ್ನು ಪ್ರೇರೇಪಿಸುವ ನಾಯಕರಿಗೆ ನೀಡಲಾಗುವ ಮಹತ್ವದ ಪ್ರಶಸ್ತಿಯಾಗಿದೆ. ಇಂತಹ ಗೌರವಕ್ಕೆ ಮಾಸ್ತಪ್ಪ ನಾಯ್ಕ ಬಲ್ಲೇ ಅವರ ಆಯ್ಕೆ, ಅವರ ದೀರ್ಘಕಾಲದ ಪರಿಶ್ರಮ, ದೃಢನಿಷ್ಠೆ ಮತ್ತು ಸಮಾಜಮುಖಿ ದೃಷ್ಟಿಕೋನಕ್ಕೆ ದೊರೆತ ಮಾನ್ಯತೆ ಎಂದೇ ಹೇಳಬಹುದು. ಇಂತಹ ಸಂತಸದ ಸಂದರ್ಭದಲ್ಲಿ ಭಟ್ಕಳ ಹಾಗೂ ಹೊನ್ನಾವರ ಕ್ಷೇತ್ರದ ಅಭಿಮಾನಿ ಬಳಗಗಳು ಹರ್ಷ ವ್ಯಕ್ತಪಡಿಸಿ, ಮಾಸ್ತಪ್ಪ ನಾಯ್ಕ ಬಲ್ಲೇ ಅವರ ಸಾಧನೆಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇಲ್ಲಿಯವರೆಗೆ ಪಡೆದ ಸನ್ಮಾನಗಳು ಅವರ ಸಾಧನೆಯ ಗುರುತುಗಳಾದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನಗಳು, ಪ್ರಶಸ್ತಿಗಳು ಮತ್ತು ಜನಮನ್ನಣೆ ಅವರಿಗೆ ಲಭಿಸಲಿ. ಸಮಾಜದಲ್ಲಿ ಅವರು ಬೆಳಗುವ ದೀಪವಾಗಿ ಇನ್ನೂ ಅನೇಕ ಮಂದಿ ಯುವಕರಿಗೆ ಪ್ರೇರಣೆಯಾಗಲಿ. ಮಾಸ್ತಪ್ಪ ನಾಯ್ಕ ಅವರ ಜೀವನ ಯಶಸ್ಸು, ಗೌರವ ಮತ್ತು ಕೀರ್ತಿಯಿಂದ ಕಂಗೊಳಿಸಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.