ಹೊನ್ನಾವರ:
ಹಿಂದು ಸಮ್ಮೇಳನ ಸಮಿತಿಯ ಹೊನ್ನಾವರ ನಗರ ಘಟಕದ ಆಶ್ರಯದಲ್ಲಿ ಪಟ್ಟಣದ ಸೇಂಟ್ ಥಾಮಸ್ ಮೈದಾನದಲ್ಲಿ ಹಿಂದೂ ಸಮ್ಮೇಳನ ನಡೆಯಿತು.

ದೀಪ ಪ್ರಜ್ವಲನದ ಮೂಲಕ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ಕಿಯ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಯವರು ಆಶಿರ್ವಚನ ನೀಡಿ, ಇಂದು ನಾವು ಪಾಶ್ಚಿಮಾತ್ಯ ಸಂಸ್ಕ್ರತಿಗೆ ಒಳಗಾಗಿದ್ದೇವೆ. ಭಾರತೀಯರಾಗಿ, ಹಿಂದೂಗಳಾಗಿ ನಮ್ಮತನವನ್ನು ಮರೆಯುತ್ತಿದ್ದೇವೆ. ಸೂರ್ಯೋದಯಕ್ಕು ಮುನ್ನ ಎಳುವುದು ರೂಡಿಸಿಕೊಳ್ಳಬೇಕು. ಗುರು-ಹಿರಿಯರ ಗೌರವಿಸುವ ಸಂಸ್ಕ್ರತಿ ಕಲಿತುಕೊಳ್ಳಬೇಕು. ಕುಟುಂಬಸ್ಥರೊಂದಿಗೆ ದ್ವೇಷ ಇಟ್ಟುಕೊಂಡಿದ್ದೇವೆ. ಮೊದಲು ಕುಟುಂಬದಲ್ಲಿ ಪ್ರೀತಿ ಮೂಡಲಿ, ಅದು ಊರು, ರಾಜ್ಯ, ದೇಶ ವ್ಯಾಪಿಸಿ ನಾವೆಲ್ಲಾ ಹಿಂದೂ ಎಂದು ಬದುಕಲು ಸಾಧ್ಯ. ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಜತೆಗೆ ಸುಸಂಸ್ಕ್ರತರನ್ನಾಗಿ ಮಾಡಿದರೆ ಭವ್ಯಭಾರತದ ಪ್ರಜೆಯಾಗಿಸಲು ಸಾಧ್ಯ. ಹಿಂದೂ ನಾವೆಲ್ಲಾ ಒಂದು ಎನ್ನುವ ಭಾವನೆಯೊಂದಿಗೆ ಮುನ್ನಡೆಯಬೇಕು ಎಂದರು.

ಶಿವಮೊಗ್ಗ ಕೂಡಲಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಜಿಯವರು ಮಾತನಾಡಿ, ಹಿಂದೂ ಸಂಸ್ಕ್ರತಿಯಲ್ಲಿ ಹೇಯ, ಹೇತು, ಹಾನ, ಹಾನೋಪಾಯ ಎನ್ನುವುದನ್ನು ಪತ್ತೆಹಚ್ಚುವುದು ರೂಡಿಸಿಕೊಳ್ಳಬೇಕು. ಸಂಘದಲ್ಲಿ ಸೇರಿಯೇ ಹಿಂದೂ ಸಮಾಜದ ಸಮಸ್ಯೆ ಬಗೆಹರಿಸಬೇಕಂತಿಲ್ಲ.ನಿತ್ಯ, ಸುಗಮ, ಸುಲಭ, ಸಾಧನರಹಿತ, ಸಂಸ್ಕಾರಕ್ಷಮ, ಸಾಮೂಹಿಕ ಆರು ಗುಣವುಳ್ಳ ಕಾರ್ಯಪದ್ದತಿ ಅಳವಡಿಸಿಕೊಳ್ಳುವ ಮೂಲಕ ಸಮಸ್ಯೆಗಳ ಬಗೆಹರಿಸಿಕೊಳ್ಳಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದು ಪರಿಷತ್ತಿನ ಕೇಂದ್ರಿಯ ಮಂತ್ರಿ ಗೋಪಾಲ್ ಜಿ ಮಾತನಾಡಿ, 25ತಾಯಂದಿರ ಸಿಂಧೂರ ಅಳಿಸಿದಕ್ಕಾಗಿ ಆಪರೆಷನ್ ಸಿಂಧೂರದ ಮೂಲಕ 100 ಜನರ ಉಗ್ರರ ಹೊಡೆದುರುಳಿಸಲಾಯಿತು. ಇಂದು ಹಿಂದೂ ಫಲಾನಯಗೈಯುವುದಿಲ್ಲ. 100ವರ್ಷ ಪೂರೈಸಿದ ಹಿನ್ನಲೆ ತನ್ನ ಪ್ರತಿಷ್ಟೆ ಬೆಳೆಸುವ ಬದಲು ಸಂಪೂರ್ಣ ಸಮಾಜ ಇದು ತನ್ನದು ಎಂದು ಸ್ವೀಕಾರ ಮಾಡಬೇಕೆಂದು ಪಣತೊಟ್ಟಿದೆ.ಕೃಷ್ಣನನ್ನು ಮೂಲಸ್ಥಾನದಲ್ಲೇ ಪ್ರತಿಷ್ಠಾಪನೆ ಮಾಡುತ್ತೇವೆ. ರಾಮಮಂದಿರ ಅದೊಂದು ರಾಷ್ಟ್ರಮಂದಿರ.
ಸಂಘಟನೆಯ ಜಿಲ್ಲಾಸಂಚಾಲಕ ಸಂಜು ಶೇಟ್ ಪ್ರಾಸ್ತಾವಿಕ ಮಾತನಾಡಿದರು. ನಗರ ಮಂಡಲ ಅಧ್ಯಕ್ಷ ಮಹೇಶ ಕಲ್ಯಾಣಪುರ ಸ್ವಾಗತಿಸಿದರು. ಸಮಿತಿ ಸಂಚಾಲಕ ವಿಶ್ವನಾಥ ನಾಯಕ ನಿರ್ವಹಿಸಿದರು. ವಿಮಲ್ ರೇವಣಕರ್ ವಂದಿಸಿದರು. ಸಂಗೀತಾ ನಾಯ್ಕ ಪ್ರಾರ್ಥನಾಗೀತೆ ಹಾಡಿದರು. ಶರಾವತಿ ವೃತ್ತದಿಂದ ಬಜಾರ ಮೂಲಕ ಸೆಂಟ್ ಥಾಮಸ್ ಮೈದಾನದರೆಗೆ ಶೋಭಾಯಾತ್ರೆ ನಡೆಯಿತು. ಪೂರ್ಣಕುಂಭ ಸ್ವಾಗತ, ಜಾನಪದ ತಂಡಗಳು, ಸ್ತಭ್ದ ಚಿತ್ರ ಪ್ರದರ್ಶನ ಶೋಭಯಾತ್ರೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮ ನಂತರ ಜಗದೀಶ ಪುತ್ತೂರು ತಂಡದಿಂದ ಭಜನಾ ಕಾರ್ಯಕ್ರಮ, ಭೋಜನ ವ್ಯವಸ್ಥೆ ನಡೆಯಿತು.
