ಗಿಲ್ಲಿನೇ ಗೆಲ್ಲಬೇಕೆಂಬ ಕೂಗು ಹಿಂದೆ ಯಾರ ಲೆಕ್ಕಾಚಾರ?

ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ದೊಡ್ಮನೆಯ ಉಳಿದ ಸ್ಪರ್ಧಿಗಳಿಗಿಂತ ಗಿಲ್ಲಿ ಪಾತ್ರದ ನಟ ನಟರಾಜ್ ಈ ಸೀಸನ್‌—ಅಂದರೆ ಬಿಗ್ ಬಾಸ್ ಕನ್ನಡ 12—ವಿಜೇತರಾಗಬೇಕೆಂಬ ಕೂಗು ಹೆಚ್ಚು ಕೇಳಿಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಇತರ ಸ್ಪರ್ಧಿಗಳಿಗಿಂತ ಗಿಲ್ಲಿ ಕುರಿತ ಪ್ರಚಾರ ಮತ್ತು ಚರ್ಚೆಗಳೇ ಹೆಚ್ಚಿನ ಗಮನ ಸೆಳೆಯುತ್ತಿವೆ. ಗಿಲ್ಲಿ ನಟ ನಟರಾಜ್ ಗೆಲ್ಬೇಕು ಅಂತ ಸೋಷಿಯಲ್ ಮೀಡಿಯಾ ತುಂಬಾ ಭಾರೀ ಪ್ರಚಾರ ನಡಿತಾ ಇದೆ. ಕಳೆದ ಸೀಸನ್‌ನಲ್ಲಿ ಹನುಮಂತ ಗೆಲ್ಬೇಕು ಎಂಬ ಕೂಗು ಕೇಳಿಬಂದಿರುವಂತೆ, ಈ ಬಾರಿ ಗಿಲ್ಲಿ ಪರ ಪ್ರಚಾರ ಜೋರಾಗಿದೆ. ಏಕೆ?

ಹೌದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು, ಶಾರ್ಟ್ಸ್‌ಗಳು ಹಾಗೂ ಮೌತ್ ಟಾಕ್ ಮೂಲಕವೂ ಹಲವರು ಗಿಲ್ಲಿ ಪರ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿಯೊಂದು ಸೀಸನ್‌ನಲ್ಲೂ ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳು ಗೆಲುವಿನ ಫೇವರೆಟ್‌ಗಳಾಗಿ ಕಾಣಿಸಿಕೊಳ್ಳುತ್ತಾರೆ. ವೀಕ್ಷಕರು ತಮ್ಮ ತಮ್ಮ ಅಭಿರುಚಿಗೆ ಅನುಗುಣವಾಗಿ ವಿಭಿನ್ನ ಸ್ಪರ್ಧಿಗಳನ್ನು ಫೆವರೆಟ್‌ ಎಂದು ಪರಿಗಣಿಸಿ, ಅವರನ್ನು ಬೆಂಬಲಿಸುತ್ತಿರುವುದು ಸಹಜವಾಗಿದೆ.

ಆದರೆ, ಈ ಬಾರಿ ಹೆಚ್ಚಿನವರು ಗಿಲ್ಲಿಗೆ ವೋಟ್ ಮಾಡಿದ್ದಾರಾ? ಹಾಗಂತ ಸ್ಷಷ್ಟವಾಗಿ ಹೇಳಲು ಆಗದು. ಆದರೆ, ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಗಿಲ್ಲಿ ಪರ ಪ್ರಚಾರಕ್ಕೆ ನಿಂತಿರುವಂತೆ ಕಾಣುತ್ತದೆ. ಯಾಕೆ ಹೀಗೆ?

ಅಶ್ವಿನಿ, ರಕ್ಷಿತಾ ಹಾಗೂ ಮಾಳು ಎಲ್ಲರೂ ಸಾಕಷ್ಟು ಸದ್ದು ಮಾಡಿದ್ದರೂ ಅವರೆಲ್ಲರಿಗಿಂತ ಗಿಲ್ಲಿ ನಟ ಒಂದು ಕೈ ಮೇಲೆ ಎನ್ನುವಂತೆಯೇ ಇದ್ದಾರೆ. ಹಾಗಂತ ಬೇರೆಯವರೇನೂ ಡಲ್ ಅಂತಲ್ಲ. ಈ ಸೀಸನ್‌ನಲ್ಲಿ ಸಾಕಷ್ಟು ಸ್ಪರ್ಧಿಗಳು ಚೆನ್ನಾಗಿಯೇ ಪರ್ಫಾಮನ್ಸ್ ಮಾಡಿದ್ದಾರೆ. ಆದರೆ, ಗಿಲ್ಲಿ ನಟ ಸ್ಪೆಷಲ್ ಎನ್ನಿಸಲು ಕಾರಣ ಅವರ ಮಾತಿನ ಟೈಮಿಂಗ್ಸ್ ಹಾಗೂ ಲೈವ್ಲಿನೆಸ್ ಎನ್ನಬಹುದೇನೋ…

ಬಿಗ್ ಬಾಸ್ ವೀಕ್ಷಕರಲ್ಲಿ ಹೆಚ್ಚಿನವರಿಗೆ ಇಷ್ಟವಾಗುವಂತೆ ಗಿಲ್ಲಿ ನಟ ಮಾತನ್ನಾಡುವುದು, ಆಟ ಆಡುವುದು ಹಾಗೂ ತಂತ್ರಗಾರಿಗೆ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ, ಸಹಜವಾಗಿಯೇ ವೀಕ್ಷಕರು ಗಿಲ್ಲಿ ನಟನಿಗೆ ಹೆಚ್ಚಾಗಿ ಕ್ಲೀನ್ ಬೋಲ್ಡ್ ಆಗಿದ್ದಾರೆ. 

ಆದರೆ ಇದರಲ್ಲಿ ಕಾಣದ ಕೈ ಏನೂ ಇಲ್ಲ ಎನ್ನಬಹುದು. ಅಷ್ಟಕ್ಕೂ, ಕಾಣದ ಕೈ ಬಗ್ಗೆ ಯಾರಾದರೂ ಹೇಳೋದಾದರೂ ಹೇಗೆ? ಅದೊಂದು ಗೇಮ್, ಆಟ ಚೆನ್ನಾಗಿ ಆಡಬೇಕು, ಜೊತೆಗೆ ಗೆಲ್ಲಲು ಅದೃಷ್ಟದ ಜೊತೆಗೆ, ವಿಕ್ಷಕರ ಅನುಗ್ರಹ ಕೂಡ ಇರಬೇಕು. ಗಿಲ್ಲಿಗೆ ಎಲ್ಲವೂ ಕೂಡಿ ಬಂದಿರಬಹುದೇ? ಅಥವಾ, ಕೊನೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬರಹುದೇ? ಸದ್ಯಕ್ಕೆ ಕಾದು ನೋಡುವುದೊಂದೇ ದಾರಿ…