ಸಾಂಸ್ಕೃತಿಕ ವೈಭವದೊಂದಿಗೆ ಹುಕ್ಕೊಳ್ಳಿ ಶಾಲೆಯ ರಜತ ಮಹೋತ್ಸವ – ಹಸಿರು ಕಾನನದ ಮಡಿಲಲ್ಲಿ ರಜತ ಮಹೋತ್ಸವದ ಸಂಭ್ರಮ

ಹೊನ್ನಾವರ – 16 ಜನವರಿ 2026 :

ಸಿರಿಗನ್ನಡದ ಚಪ್ಪರದ ಅಡಿಯಲ್ಲಿ ತಲೆಯೆತ್ತಿ ನಿಂತ ಉತ್ತರಕನ್ನಡ ಜಿಲ್ಲೆಯ ಹೊನ್ನು ಚಿನ್ನದ ವ್ಯಕ್ತಿತ್ವದ ವ್ಯಕ್ತಿಗಳ ಗಣಿಯಾದ ಹೊನ್ನಾವರ ತಾಲೂಕಿನ ಉಪ್ಪೋಣಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹುಕ್ಕೊಳ್ಳಿ ಹಸಿರು ಕಾನನದಲ್ಲಿದೆ. ಇಲ್ಲಿ ಒಂದು ಪುಟ್ಟದಾದ ಸುಂದರವಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಈ ಶಾಲೆಗೆ ನಾಳೆ ದಿನಾಂಕ 17 ಜನವರಿಯರಂದು ರಜತಮಹೋತ್ಸವದ ಸಂಭ್ರಮ.

1994-95ನೇ ಸಾಲಿನಲ್ಲಿ ಊರಿನ ನಾಗರಿಕರೆಲ್ಲಾ ಸೇರಿ ಇಲಾಖೆಯ ಮುತುವರ್ಜಿಯಿಂದ ಹುಕ್ಕೊಳ್ಳಿಯಲ್ಲಿ ಒಂದು ಶಾಲೆಯನ್ನು ಶ್ರೀಯುತ ದಿವಂಗತ ಕೃಷ್ಣ ನಾರಾಯಣ ಮರಾಠಿಯಂತಹ ಸಹಾಯಸ್ತ ಶಾಲೆಯ ನಿರ್ಮಾಣದಲ್ಲಿ ಅಡಿಪಾಯವಾಗಿ ಸದೃಢ ಶಕ್ತಿಯಾಗಿ ಶಾಲೆಯು ಪ್ರಾರಂಭವಾಯಿತು.

ಶಾಲೆಯು ಸುಂದರವಾಗಿ ಕಂಗೊಳಿಸುತ್ತಿದ್ದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಕ್ಕೊಳ್ಳಿಯ ರಜತಮಹೋತ್ಸವ ಕಾರ್ಯಕ್ರಮ. ಗ್ರಾಮ ಪಂಚಾಯತ್ ಉಪ್ಪೋಣಿಯ ಸಹಕಾರದಿಂದ, ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರ ಊರಿನ ಗ್ರಾಮಸ್ಥರ ಸಹಕಾರ ಇಲಾಖೆಯ ಸಹಕಾರದಿಂದ, ಶಿಕ್ಷಣಾಭಿಮಾನಿಗಳ ಸಹಾಯ-ಸಹಕಾರದೊಂದಿಗೆ ರಜತಮಹೋತ್ಸವಕ್ಕೆ ಮೆರಗನ್ನು ನೀಡಿದೆ.

ಮುಂಜಾನೆ 10 ಗಂಟೆಗೆ ಉದ್ಘಾಟನೆ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಮಕ್ಕಳು ಊರಿನ ಗ್ರಾಮಸ್ಥರು, ಶಿಕ್ಷಣಾಭಿಮಾನಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ, ಶಾಲಾ ಮುಖ್ಯದ್ವಾರ ಉದ್ಘಾಟನೆ, ಹಸ್ತಪತ್ರಿಕೆ ಬಿಡುಗಡೆ, ಕಲಿಕೋಪರಣ ಕೊಠಡಿ ಉದ್ಘಾಟನೆ ನಡೆಯಲಿದೆ ಎಂದು ಮುಖ್ಯಾಧ್ಯಾಪಕರಾದ ರಮಾನಂದ ಫಂಡು ನಾಯ್ಕ ತಿಳಿಸಿದರು.

ಸಂಜೆಯ ಕಾರ್ಯಕ್ರಮದಲ್ಲಿ ಗಾನ, ನಾಟ್ಯ, ವೈಭವ ನಗೆಹಬ್ಬ 2026 ಉತ್ತರಕನ್ನಡ ಜಿಲ್ಲೆಯ ಖ್ಯಾತ ನಿರೂಪಕ ಮಹೇಶರವರ ಹ್ಯಾಪಿ ಇವೆಂಟ್ಸ್ ಸಾರಥ್ಯದಲ್ಲಿ ಜಿಲ್ಲೆಯ ಖ್ಯಾತ ಗಾಯಕ-ಗಾಯಕಿಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ವಿಶೇಷ ಆಕರ್ಷಣೆಯಲ್ಲಿ ಜ್ಯೂನಿಯರ್ ಪುನೀತ್ ರಾಜಕುಮಾರ್, ಜೀ ವಾಹಿನಿಯ ಡಿ.ಕೆ.ಡಿ ಸ್ಟೆಪ್ ಇನ್ ಸ್ಟೈಲ್ ಸಾಸ್ತಾನ್ ಇನ್‌ಸ್ಟಾ ಹಾಗೂ ಮಾಡಲಿಂಗ್ ಕ್ವೀನ್ ದೀಪಿಕಾ ಇವರಿಂದ ಕಾರ್ಯಕ್ರಮ ನಡೆಯಲಿದೆ.