ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ ಕೊಳಗಿ ವಿರುದ್ಧ ಸೋಮವಾರ 12 ಜನ ಸದಸ್ಯರು ಅವಿಶ್ವಾಸ ಮಂಡನೆ ಮಾಡಿದ್ದಾರೆ.
ಮಳಗಿ ಗ್ರಾಮ ಪಂಚಾಯಿತಿ ಹದಿನೇಳು ಜನ ಸದಸ್ಯರ ಬಲವನ್ನು ಹೊಂದಿದ್ದು ಇದರಲ್ಲಿ ಕಾಂಗ್ರೆಸ್ ಬಂಬಲಿತ ಸದಸ್ಯ ಪ್ರದೀಪ ಕೊಳಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿಲ್ಲ, ಹಾಗೂ ನಮ್ಮ ವಾರ್ಡಗಳ ಅಭಿವೃದ್ಧಿ ಕೆಲಸಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಇತ್ತೀಚೆಗೆ ಕೆಲವು ಸದಸ್ಯರು ಅಧ್ಯಕ್ಷರ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಸದಸ್ಯರುಗಳು ಶಿರಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಅವಿಶ್ವಾಸ ಮಂಡನೆಗೆ ಅವಕಾಶ ಕೊರಿದ್ದರು.
ಇಂದು ಅವಿಶ್ವಾಸ ಮಂಡನೆ ಸಭೆಯನ್ನು ನಡೆಸಲಾಯಿತು. 12 ಸದಸ್ಯರು ಅವಿಶ್ವಾಸ ಸಭೆಗೆ ಹಾಜರಾಗಿ ಅಧ್ಯಕ್ಷ ಪ್ರದೀಪ ವಿರುದ್ಧ ಅವಿಶ್ವಾಸ ಮಂಡಿಸಿದರು. ಇನ್ನು ಅಧ್ಯಕ್ಷ ಹಾಗೂ ಇತರೆ ನಾಲ್ಕು ಜನ ಸದಸ್ಯರು ಸಭೆಗೆ ಬಾರದೆ ಗೈರು ಹಾಜರಾಗಿದ್ದರು.
ಶಿರಸಿ ಸಹಾಯಕ ಆಯುಕ್ತ ಡಿ.ದೇವರಾಜ, ತಹಸೀಲ್ದಾರ್ ಶಂಕರ ಗೌಡಿ, ಪಿಡಿಒ ಶ್ರೀನಿವಾಸ ಮರಾಠೆ, ರಾಘವೆಂದ್ರ ಗಿರೆಡ್ಡಿ ಅವಿಶ್ವಾಸ ಸಭೆಯಲ್ಲಿ ಉಪಸ್ಥಿತರಿದ್ದರು.