ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್.!
ಕಾರವಾರ: ಭಟ್ಕಳದಲ್ಲಿ ಬಾಲಕನ ಕಿಡ್ನ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ. ಕೊಟ್ಟ ಹಣ ವಾಪಾಸ್ ಪಡೆಯಲು ಸ್ವತಃ ಅಜ್ಜನೇ ಮೊಮ್ಮಗನನ್ನು ಕಿಡ್ಯ್ನಾಪ್ ಮಾಡಿಸಿದ್ದಾನೆ. ಸೌದಿ ಅರೇಬಿಯಾದಲ್ಲಿರುವ ಬಾಲಕನ ಅಜ್ಜ ಇನಾಯತುಲ್ಲಾ ಮೊಮ್ಮಗನ ಕೀಡ್ನ್ಯಾಪ್ ಗೆ ಸ್ಕೆಚ್ ಹಾಕಿದ್ದ. ತಾಯಿಯ ಸಂಬಂಧಿಯಾಗಿರುವ ಇನಾಯತುಲ್ಲಾ ಪ್ರಕರಣದ ಪ್ರಮುಖ ಆರೋಪಿ.
ಘಟನೆಯ ಹಿನ್ನೆಲೆ
ಭಟ್ಕಳದಲ್ಲಿ ಆ. 20 ರಂದು ರಾತ್ರಿ ಎಂಟು ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಒಟ್ಟು ನಾಲ್ವರು ಕಾರಿನಲ್ಲಿ ಬಂದು ಬಾಲಕನನ್ನು ಅಪಹರಣ ಮಾಡಿದ್ದರು. ಭಟ್ಕಳ ಆಜಾದ ನಗರದ ಅಲಿ ಇಸ್ಲಾಂ ಸಾದಾ (8) ಎನ್ನುವ ಬಾಲಕನನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ದರು.
ಘಟನೆಯಲ್ಲಿ ಮೇಜರ್ ಟ್ವಿಸ್ಟ್.!
ಇಂದು ಗೋವಾದ ಕಲ್ಲಂಗುಟ ಬೀಚ್ ಸಮೀಪ ಬಾಲಕ ಪತ್ತೆಯಾಗಿದ್ದಾನೆ. ಬಾಲಕನ ಜತೆಗಿದ್ದ ಓರ್ವ ಆರೋಪಿಯ ನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಬದ್ರಿಯಾ ನಗರದ ನಿವಾಸಿ ಕೋಳಿ ಅಂಗಡಿ ನಡೆಸುತ್ತಿದ್ದ ಅನೀಸ್ ಭಾಷಾ ಬಂಧಿತ ಆರೋಪಿ. ಬಾಲಕನ ಅಜ್ಜನ ಸೂಚನೆಯಂತೆ ಅನೀಸ್ ಭಾಷಾ ತಂಡದೊಂದಿಗೆ ಕಿಡ್ನ್ಯಾಪ್ ಮಾಡಿದ್ದ. ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಡಾ. ಸುಮನ್ ಪೆನ್ನೇಕರ್ ಮಾಹಿತಿ
ಪ್ರಕರಣ ಸಂಬಂಧಿಸಿ ಬಾಲಕನ ಅಜ್ಜ ಸೇರಿ ಇನ್ನೂ ನಾಲ್ವರು ಆರೋಪಿಗಳ ಬಂಧನಕ್ಕೆ ಪೊಲೀಸರು ತಯಾರಿ ನಡೆಸಿದ್ದಾರೆ. ಬಾಲಕನ ತಂದೆ ಮತ್ತು ಮಾವನ ನಡುವೆ ಹಣಕಾಸಿನ ವ್ಯವಹಾರವೇ ಕಿಡ್ಯ್ನಾಪ್‌ಗೆ ಕಾರಣವಾಗಿತ್ತು. ಇದೇ ವಿಚಾರವಾಗಿ ಈ ಹಿಂದೆ ಕೂಡಾ ಬಾಲಕನ ತಂದೆಗೆ ಬೆದರಿಕೆ ಹಾಕಲಾಗಿತ್ತು. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಬಗ್ಗೆ ಉತ್ತರಕನ್ನಡ ಜಿಲ್ಲಾ ಎಸ್ಪಿ ಡಾ. ಸುಮನ್ ಪೆನ್ನೇಕರ್ ಮಾಹಿತಿ ನೀಡಿದ್ದಾರೆ.