ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಹಾಗೂ ಆತನ ಪತ್ನಿ ಆತ್ಮಹತ್ಯೆಯ ಪತ್ರ ಬರೆದಿಟ್ಟು ಕಾಣೆಯಾದ ಘಟನೆ

ಹೊನ್ನಾವರ : ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಹಾಗೂ ಆತನ ಪತ್ನಿ ಆತ್ಮಹತ್ಯೆಯ ಪತ್ರ ಬರೆದಿಟ್ಟು ಕಾಣೆಯಾದ ಘಟನೆ ನಡೆದಿದೆ.

ನಾನು ವೀಣಾ ಪೂಜಾರಿ ನನ್ನ ಪತಿ ಮಂಜುನಾಥ ಜಿ ನಾಯ್ಕ ನಾವಿಬ್ಬರೂ ಜೊತೆಯಲ್ಲೇ ಕುಳಿತು ಈ ಪತ್ರ ಬರೆಯುತ್ತಿದ್ದೇವೆ. ನನ್ನ ಗಂಡ ಅರಣ್ಯ ಇಲಾಖೆಯಲ್ಲಿ ಕಳೆದ 30 ವರ್ಷದಿಂದ ಚಾಲಕರಾಗಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಗೇರಸೊಪ್ಪ RFO ಕಾರ್ತಿಕ ಕಾಂಬ್ಳೆ ಕಿರುಕುಳ ನೀಡುತ್ತಿದ್ದು ಇದರಿಂದಾಗಿ ನಾನು ನನ್ನ ಪತಿ ಇಬ್ಬರೂ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದೇವೆ .ಇದಕ್ಕೆ RFO ಕಾರ್ತಿಕ ಕಾಂಬ್ಳೆ ಹಾಗೂ DFO ಯೋಗಿಶ್ ಕಾರಣ ಅಂತಾ ಪತ್ರವೊಂದನ್ನ ಬರೆದಿಟ್ಟು ಮಂಜುನಾಥ ನಾಯ್ಕ ದಂಪತಿ ನಾಪತ್ತೆಯಾಗಿದ್ದಾರೆ.

ಕೆರೆಕೋಣದ ಮಂಜುನಾಥ ನಾಯ್ಕ ಅವರು ಕಳೆದ ಮೂವತ್ತು ವರ್ಷದಿಂದ ತಾಲೂಕಿನ ಗೇರುಸೊಪ್ಪ ವಲಯ ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ಅಧಿಸೂಚಿತ ನೌಕರರಾಗಿ ಚಾಲಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕಳೆದ ಒಂದುವರೆ ವರ್ಷದ ಹಿಂದೆ ಗೇರಸೊಪ್ಪ ಅರಣ್ಯ ಇಲಾಖೆಗೆ RFO ಆಗಿ ಬಂದ ಕಾರ್ತಿ ಕಾಂಬ್ಳೆಯವರು ಚಾಲಕ ಮಂಜುನಾಥ ಗಣಪತಿ ನಾಯ್ಕ ಅವರಿಗೆ ಇಂದಿನಿಂದ ನೀನು ಡ್ರೈವರ್ ಆಗಿ ಕೆಲಸ ಮಾಡೋದು ಬೇಡ. ಕಚೇರಿಯಲ್ಲಿ ಅಡುಗೆ ಮಾಡೊಂಡು ಇರಬೇಕು ಎಂದಿದ್ದಾರೆನ್ನಲಾಗಿದೆ. ಇದಕ್ಕೆ ಮಂಜುನಾಥ ನಾಯ್ಕ ನಾನು ಚಾಲಕನಾಗಿ ಸೇರಿರುವವನು ಮತ್ತು ಅಡುಗೆ ಮಾಡೋದಕ್ಕೆ ಬರುವುದಿಲ್ಲ ಎಂದಿದ್ದಾರಂತೆ. ಆದರೂ ಅವರ ಮಾತು ಕೇಳದ RFO ಅವರು ಕೆಲ ತಿಂಗಳುಗಳ ಕಾಲ ಖಾಲಿ ಇರಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ ನಾಯ್ಕ ಅವರು ಸಂಘದ ರಾಜ್ಯಾಧ್ಯಕ್ಷರಿಗೂ RFO ಅವರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಬಳಿಕ ರಾಜ್ಯಾಧ್ಯಕ್ಷರು ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಪುನಃ ಮಂಜುನಾಥ ನಾಯ್ಕ ಅವರಿಗೆ ಡ್ರೈವ‌ರ್ ಕೆಲಸ ಕೊಡಿಸುವ ಭರವಸೆ ನೀಡಿದ್ದರಂತೆ. ಆದರೆ ಹಿರಿಯ ಅಧಿಕಾರಿಗಳ ಹೇಳಿದರು RFO ಮಂಜುನಾಥ ನಾಯ.
ಅವರಿಗೆ ಡ್ರೈವೈವರ ಕೆಲಸ ಕೊಡಿಸದೆ. ಕಚೇರಿಯಲ್ಲಿ ಕೆಟ್ಟದಾಗಿ ಮಾತನಾಡುವುದು ಎಲ್ಲರ ಎದುರು ಅವಮಾನಿಸುವ ಕೆಲಸ ಮಾಡುತ್ತಿದ್ದರೂ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಅಧಿಕಾರಿಯ ಕಿರುಕುಳದಿಂದ ನೋಂದ ನಾನು ಹಾಗೂ ಪತಿ ಇಬ್ಬರೂ ಎಲ್ಲಿಯಾದರೂ ದೂರ ಹೋಗಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಮಾಡಿಯೇ ಈ ಪತ್ರ ಬರೆದಿಟ್ಟು ನವೆಂಬರ್ 26ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿನೋಧ ನಾಯ್ಕ ಎಂಬುವವರು ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಮಂಜುನಾಥ ದಂಪತಿಯನ್ನ ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾರೆ.ಪ್ರಕರಣ ತೆಗೆದುಕೊಂಡ ಹೊನ್ನಾವರ ಪೊಲೀಸರು ತನಿಖೆ ನಡೆಸುತ್ತಿದ್ದು, ಪೊಲೀಸರ ತನಿಖೆಯ ನಂತರವಷ್ಟೆ ಪ್ರಕರಣ ಸತ್ಯಾಸತ್ಯತೆ ಹೊರಬರಬೇಕಿದೆ.