2025-26 ನೆ ಶೈಕ್ಷಣಿಕ ವರ್ಷದ ವಿಭಾಗ ಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಹುಬ್ಬಳ್ಳಿಯ ಕೆ.ಎಲ್.ಇ ಪ್ರೇರಣ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದ್ದು, ಕೆನರಾ ಎಕ್ಸಲೆನ್ಸ್ ಕಾಲೇಜು ಗೋರೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ವಸ್ತಿ ಎಮ್ ಭಟ್ಟ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಇವಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ.ಜಿ ಹೆಗಡೆಯವರು , ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಡಿ .ಎನ್ . ಭಟ್ಟ , ಪ್ರಾಚಾರ್ಯರಾದ ನಾಗರಾಜ್ ಹೆಗಡೆ, ಆಡಳಿತ ಅಧಿಕಾರಿಗಳಾದ ಶಶಾಂಕ್ ಶಾಸ್ತ್ರಿ, ಸಾಂಸ್ಕೃತಿಕ ಸಂಚಾಲಕಿ ಶ್ರೀಮತಿ ಪೂಜಾ ಭಟ್ಟ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.




