ಹೆಗ್ಗಡೆಯವರಿಗೆ ಹ್ಯಾಪಿ ಬರ್ತಡೇ ಎಂದ ವಿಶೇಷ ಚೇತನ ಮಕ್ಕಳು

ಹೊನ್ನಾವರ ನ. 25 : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನೋತ್ಸವದ ಅಂಗವಾಗಿ ರಾಜ್ಯದಲ್ಲಿರುವ ಧರ್ಮಸ್ಥಳದ ಸಂಘಟನೆ ಮತ್ತು ಸಂಸ್ಥೆಗಳಲ್ಲಿ ವಿಶೇಷ ಸೇವಾ ದಿನವನ್ನು ಆಚರಿಸಲಾಯಿತು. ಅಂಗವಿಕಲ, ಬುದ್ಧಿಮಾಂದ್ಯ, ರೋಗಪೀಡಿತ, ಅನಾಥ ಜನಗಳಿರುವ ಸಂಘಟನೆಗಳಿಗೆ ಹೋಗಿ ಅವರಿಗೆ ಉಡುಗೊರೆ, ಊಟ, ಹಣ್ಣು-ಹಂಪಲು ನೀಡಲಾಯಿತು.

ನಗರದಲ್ಲಿರುವ ಪೆದ್ರು ಪೊವಡಾ ವಿಶೇಷ ಚೇತನಾ ಮಕ್ಕಳ ಶಾಲೆಗೆ ತೆರಳಿದ ಧರ್ಮಸ್ಥಳ ಯೋಜನೆಯ ಸದಸ್ಯರು ಮತ್ತು ಫಲಾನುಭವಿಗಳು ಮಕ್ಕಳಿಗೆ ಹಣ್ಣು-ಹಂಪಲು ನೀಡಿದರು. ವಿಶೇಷ ಊಟವನ್ನು ಬಡಿಸಲಾಯಿತು. ಮಕ್ಕಳು ಈ ಸಂದರ್ಭದಲ್ಲಿ ನೃತ್ಯದೊಂದಿಗೆ ಹೆಗ್ಗಡೆಯವರಿಗೆ ಹ್ಯಾಪಿ ಬರ್ತಡೇ ಶುಭಕೋರಿದ್ದು ಹೃದಯ ಸ್ಪರ್ಶಿಯಾಗಿತ್ತು. ಯೋಜನಾಧಿಕರಿ ಪ್ರಭಾಕರ ಮತ್ತು ಪತ್ರಕರ್ತ ಜೀಯು ಭಟ್, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.