ಸಿದ್ದಾಪುರದ ಕೋಡ್ಸರ ಬಳಿ ಭೂ ಕುಸಿತಕ್ಕೆ 70 ಅಡಿ ಬಿದ್ದು ಬೈಕ್ ಸವಾರನು ಮೃ**

ಸಿದ್ದಾಪುರ: ತಾಲೂಕಿನ ಕಾನಸೂರು ಬಾಳೇಸರ ರಸ್ತೆಯ ಕೋಡ್ಸರ ಸಮೀಪ ಧರೆ ಕುಸಿತಗೊಂಡಲ್ಲಿ ಬ್ಯೆಕ್ ಸವಾರನೋರ್ವ 70ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ..ಸ್ಥಳಕ್ಕೆ ಸಿದ್ದಾಪುರ ಪೊಲೀಸರು ತೆರಳಿದ್ದಾರೆ.


ಈ ಘಟನೆ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಸಮಯದಲ್ಲಿ ನಡೆದಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
ಸ್ಥಳೀಯರೊಬ್ಬರ ಮನೆಯ ಕೆಲಸದ ಆಳುಗಳು ಶನಿವಾರ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ತೋಟದಲ್ಲಿ ಅಡಿಕೆ ಆರಿಸುತ್ತಿರುವಾಗ ದರೆ ಅಂಚಿನಲ್ಲಿ ಬೈಕ್ ಗಿಡಗಳ ಮಧ್ಯ ಸಿಕ್ಕಕೊಂಡಿದ್ದನ್ನು ಹಾಗೂ ವ್ಯಕ್ತಿಯ ದೇಹ ಕೊಡಲಿಗೆ ಬಿದ್ದಿರುವುದನ್ನು ಗಮನಿಸಿ ಊರಿನವರಿಗೆ ಹೇಳುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.