ಹೊನ್ನಾವರ: ಹಿರಿಯ ರಾಜಕಾರಣಿ ಜಲವಳ್ಳಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾಗಿ, ವಿ ಎಸ್ ಎಸ್ ಜಲವಳ್ಳಿ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಎಲ್ಲರೊಂದಿಗೆ ಅತ್ಯಂತ ಆತ್ಮೀಯತೆ ಹೊಂದಿದ್ದ ದೇವರಾಯ ನಾಯ್ಕ ನಮ್ಮನ್ನೆಲ್ಲಾ ಅಗಲಿರುವುದು ದುಃಖದ ಸಂಗತಿ. ಭಗವಂತ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ. ಸುನೀಲ ನಾಯ್ಕ ಹಾಗೂ ಜೆ.ಡಿ ನಾಯ್ಕ ಅಂತಿಮ ನಮನ ಸಲ್ಲಿಸಿದರು. ತಾಲೂಕಿನ ಗಣ್ಯರಯ ರಾಜಕೀಯ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು, ಸಾರ್ವಜನಿಕರು, ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದ್ರು…




