ಮೆಕ್ಸಿಕೋ ಸಿಟಿ: ಉತ್ತರ ಮೆಕ್ಸಿಕೋದ (Mexico) ಹರ್ಮೊಸಿಲ್ಲೊದಲ್ಲಿರುವ ವಾಲ್ಡೋ ಸೂಪರ್‌ಮಾರ್ಕೆಟ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ 23 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, “ಮೃತರ ಕುಟುಂಬಗಳು ಮತ್ತು ಗಾಯಾಳುಗಳಿಗೆ ನೆರವು ನೀಡಲು ಆಂತರಿಕ ಕಾರ್ಯದರ್ಶಿ ರೋಸಾ ಐಸ್ಲಾ ರೊಡ್ರಿಗಸ್ ನೇತೃತ್ವದ ತಂಡವನ್ನು ಕಳುಹಿಸುವಂತೆ ಸೂಚಿಸಿದ್ದೇನೆ” ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ವಿಷಕಾರಿ ಅನಿಲ ಉಸಿರಾಟವೇ ಅನೇಕ ಮಂದಿಯ ಸಾವಿಗೆ ಕಾರಣವಾಗಿದೆ ಎಂದು ರಾಜ್ಯದ ವಿಧಿವಿಜ್ಞಾನ ವೈದ್ಯಕೀಯ ಸೇವೆಯ ಅಟಾರ್ನಿ ಜನರಲ್ ಗುಸ್ತಾವೋ ಸಲಾಸ್ ತಿಳಿಸಿದ್ದಾರೆ.
