ಚೀನಾದಲ್ಲಿ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಕಾರು ಪ್ರಯಾಣ

ಬೀಜಿಂಗ್, ಸೆಪ್ಟೆಂಬರ್ 01: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಶೃಂಗಸಭೆ ವೇಳೆ ಒಂದೇ ಕಾರಿನಲ್ಲಿ ಸಂಚಾರ ಮಾಡಿದರು. ಶೃಂಗಸಭೆಯ ವೇದಿಕೆಯಿಂದ ದ್ವಿಪಕ್ಷೀಯ ಮಾತುಕತೆ ನಡೆಯುವ ಸ್ಥಳಕ್ಕೆ ಇಬ್ಬರು ನಾಯಕರು ರಷ್ಯಾದ ಐಷಾರಾಮಿ ಔರಸ್ ಕಾರಿನಲ್ಲಿ ಜೊತೆಯಾಗಿ ಪ್ರಯಾಣ ಬೆಳೆಸಿದರು.

ಈ ಕುರಿತು ತಮ್ಮ ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ, “ಶೃಂಗಸಭೆಯ ಸ್ಥಳದಿಂದ ನಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಒಟ್ಟಿಗೆ ಪ್ರಯಾಣಿಸಿದೆವು. ಪುಟಿನ್ ಜೊತೆಗಿನ ಸಂಭಾಷಣೆಗಳು ಯಾವಾಗಲೂ ಆಳವಾದ ಒಳನೋಟ ನೀಡುತ್ತವೆ” ಎಂದು ಬರೆದುಕೊಂಡಿದ್ದಾರೆ.