ದಿ. 13ರಂದು ಜಿಲ್ಲಾಮಟ್ಟದ ಗಾಂಧಿ ಸ್ಮೃತಿ ಮತ್ತು ಜನಜಾಗೃತಿ ಸಮಾವೇಶ

ಹೊನ್ನಾವರ ಅ. 08: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ್ ಜನಜಾಗೃತಿ ವೇದಿಕೆ ಟ್ರಸ್ಟ್ ಈ ಸಂಸ್ಥೆಗಳ ಉತ್ತರಕನ್ನಡ ಜಿಲ್ಲಾ ವಿಭಾಗದಿಂದ ಜಿಲ್ಲಾಮಟ್ಟದ ಗಾಂಧಿಜಯಂತಿಯ ಮಾಸಾಚರಣೆಯ ನಿಮಿತ್ತ ಜನಜಾಗೃತಿ ಸಮಾವೇಶವನ್ನು ದಿ. 13ರಂದು ಬೆಳಿಗ್ಗೆ 10ಘಂಟೆಗೆ ನಗರದ ಪ್ರಭಾತನಗರದಲ್ಲಿರುವ ಮೂಡಗಣಪತಿ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ಸಚಿವ ಮಂಕಾಳ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ ನಾಯ್ಕ ಅವರ್ಸಾ ಅಧ್ಯಕ್ಷತೆ ವಹಿಸುವರು. ಶಾಸಕ ದಿನಕರ ಶೆಟ್ಟಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣಾ, ಭಟ್ಕಳ ಡಿವೈಎಸ್‌ಪಿ ಮಹೇಶ, ತಹಶೀಲ್ದಾರ ಪ್ರವೀಣ ಕರಾಂಡೆ, ಮಾಜಿ ಶಾಸಕ ಗಂಗಾಧರ ಭಟ್, ಪ.ಪಂ. ಉಪಾಧ್ಯಕ್ಷ ಸುರೇಶ ಹೊನ್ನಾವರ ಅತಿಥಿಗಳಾಗಿ ಪಾಲ್ಗೊಳ್ಳುವರು. ಹಿರಿಯ ಪತ್ರಕರ್ತ ಜೀಯು ಭಟ್ ಗಾಂಧಿ ಚಿಂತನೆಗಳ ಕುರಿತು ಆಶಯ ಭಾಷಣ ಮಾಡುವರು.

ಧರ್ಮಸ್ಥಳದ ವ್ಯಸನಮುಕ್ತಿ ಶಿಬಿರದಲ್ಲಿ ಪಾಲ್ಗೊಂಡು ಮದ್ಯಪಾನ ತ್ಯಜಿಸಿ ನವಜೀವನವನ್ನು ಆರಂಭಿಸಿದ ಸಮಿತಿಯ ಸದಸ್ಯರನ್ನು ಅಭಿನಂದಿಸುವ ಕಾರ್ಯಕ್ರಮವಿದೆ. ನಡೆಯುವವರು ಜಾರದಂತೆ, ಜಾರುವವರು ಬೀಳದಂತೆ, ಬಿದ್ದವರನ್ನು ಎತ್ತುವುದೇ ಜನಜಾಗೃತಿ ಕಾರ್ಯಕ್ರಮದ ಗುರಿಯಾಗಿರುವುದರಿಂದ ಈವರೆಗೆ 1,30,111ಜನ ಮದ್ಯಪಾನ ತ್ಯಜಿಸಿ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿ ನವಜೀವನ ಆರಂಭಿಸಿದವರನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕರು ಕೋರಿದ್ದಾರೆ.