ವಿಶ್ವಭಾರತಿಯಲ್ಲಿ ಪುಟಾಣಿ ರಾಧಾ ಕೃಷ್ಣರು.!

ಶಿರಸಿ: ವಿಶ್ವಭಾರತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪುಟಾಣಿ ರಾಧಾಕೃಷ್ಣರ ಹೆಜ್ಜೆಯ ಗೆಜ್ಜೆ ಸದ್ದು ನೊಡುಗರಲ್ಲಿ ಪ್ರೀತಿಯ ಮಮತೆಯನ್ನು ಕಟ್ಟಿ ಕೊಟ್ಟಿತ್ತು. ಅರವತ್ತಕ್ಕೂ ಅಧಿಕ ಪುಟಾಣಿ ರಾಧಾ ಕೃಷ್ಣರು ಮುದ್ದು ಕೃಷ್ಣನ ವೇಷಗಳಿಂದ ಗಮನ ಸೆಳೆದರು.

ಶ್ರೀಕೃಷ್ಣಾಷ್ಠಮಿ‌ ಹಿನ್ನಲೆಯಲ್ಲಿ ಹಮ್ಮಿಕೊಂಡ 2 ರಿಂದ 4 ಹಾಗೂ 4 ರಿಂದ 6 ವರ್ಷದ ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಶನಿವಾರ ನಡೆಸಲಾಯಿತು. ಸ್ಪರ್ಧೆಯ ನಿರ್ಣಾಯಕರಾಗಿ ವಿಜಯಾ ದೇಶಪಾಂಡೆ, ಪ್ರತಿಮಾ ಸ್ವಾದಿ, ರವಿ ಭಟ್ ಪಾಲ್ಗೊಂಡಿದ್ದರು.

ಕಿರಿಯರ ವಿಭಾಗದಲ್ಲಿ ಪ್ರಣಮ್ಯಾ ಹೆಗಡೆ ಪ್ರಥಮ ಸ್ಥಾನ ಪಡೆದು ಕೊಂಡರೆ, ಪರ್ಣಿಕ ಹೆಗಡೆ ಹಾಗೂ ರಿಷಿ ಆಚಾರಿ ದ್ವಿತೀಯ, ಸಾನ್ವಿ ಶೇಟ್, ಸಾದ್ವಿಕಾ ಭಟ್ ತೃತೀಯ ಬಹುಮಾನ ಪಡೆದರು. ಹಿರಿಯರ ವಿಭಾಗದಲ್ಲಿ ಮಹತಿ ಹೆಗಡೆ ಪ್ರಥಮ ಸ್ಥಾನ ಮುಡಿಗೆರಿಸಿಕೊಂಡರೆ, ಆದ್ಯಾ ಹೆಗಡೆ ದ್ವಿತೀಯ ಸ್ಥಾನ ಹಾಗೂ ಆರ್ಯ ಹೆಗಡೆ ಮತ್ತು ಸಿರಿ ಭಟ್ಟ ತೃತೀಯ ಸ್ಥಾನ ಪಡೆದು ಕೊಂಡರು.

ಈ ವೇಳೆ ಶಾಲಾ ಮುಖ್ಯ ಸಂಸ್ಥಾಪಕಿ ವೀಣಾ ಹೆಗಡೆ ಶಿಕ್ಷಕಿಯರಾದ ಮೇಧಾ ಭಟ್ಟ ಅರಸಗೋಡು, ಸಂಧ್ಯಾ ಹೆಗಡೆ, ಪುಷ್ಪಾ ಮಡಗಾಂವಕರ್, ರಶ್ಮಿ ‌ಭಟ್ಟ, ಸೇರಿದಂತೆ ಮಕ್ಕಳ ಪಾಲಕರು ಹಾಜರಿದ್ದರು.