ಕುಮಟಾದ ನೂತನ ಸಹಾಯಕ ಆಯುಕ್ತರಾಗಿ ಪಿ. ಶ್ರೀವನ್‌ ಕುಮಾರ ನೇಮಕ

ಕುಮಟಾದ ಉಪ ವಿಭಾಗದ ಸಹಾಯಕ ಆಯುಕ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಲ್ಯಾಣಿ ಕಾಂಬ್ಳೆ ಅವರನ್ನು ವರ್ಗಾವಣೆಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿ ಅವರ ಸ್ಥಾನಕ್ಕೆ ಐಎಎಸ್‌ ಕೆಎನ್:2023‌ ಬ್ಯಾಚ್‌ನ ಪಿ.ಶ್ರೀವನ್‌ ಕುಮಾರ್‌ ಅವರನ್ನು ಕುಮಟಾದ ನೂತನ ಸಹಾಯಕ ಆಯುಕ್ತರಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣಾ ಇಲಾಖೆ ಈ ಕುರಿತು ಅಧಿಕೃತ ಮಾಹಿತಿ ನೀಡಿದೆ.. ಶ್ರೀವನ್‌ ಕುಮಾರ್‌ ಅವರು ತಮ್ಮ ಹೊಸ ಕರ್ತವ್ಯವನ್ನು ಕೈಗೊಳ್ಳಲಿದ್ದು ಕುಮಟಾ ತಾಲೂಕಿನಲ್ಲಿ ಆಡಳಿತಾತ್ಮಕ ಸುಧಾರಣೆ ತರುವಲ್ಲಿ ಹೇಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕಾದು ನೋಡಬೇಕಿದೆ..