ಹೊನ್ನಾವರ ಜ.21: ತಾಲೂಕಿನ ಕೊಂಡಾಕುಳಿಯಲ್ಲಿ ಮಾಂಸಕ್ಕಾಗಿ ಗರ್ಭಿಣಿ ಗೋವಿನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್.ನಾರಾಯಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ಈ ವೇಳೆ ಗೋವಿನ ಮಾಲೀಕರಾದ ಕೃಷ್ಣ ಆಚಾರಿಯವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ರು. ಅಪರಾಧಿಗಳು ಯಾರೇ ಆದರು ಅವರನ್ನು ಬಂಧಿಸಿ,ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಗೋವು ಸಾಕುವವರ ನೋವು ಏನು ಎನ್ನುವುದು ನಮಗೂ ತಿಳಿದಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ. ಇದಕ್ಕಾಗಿ 6 ತಂಡಗಳನ್ನು ರಚಿಸಿದ್ದೇವೆ ಎಂದು ಹೇಳಿದ್ರು..

ಕೃಷ್ಣಾ ಆಚಾರಿಯವರು ಇದಕ್ಕೆ ಪ್ರತಿಕ್ರಿಯಿಸಿ, ನಮಗೆ ನ್ಯಾಯ ಸಿಗಬೇಕು. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಿ ಎಂದು ವಿನಂತಿಸಿದರು. ನಂತರ ಘಟನಾ ಸ್ಥಳ ಪರಿಶೀಲಿಸಿ ಅಣತಿದೂರದವರೆಗೂ ಕಾಲು ಹಾದಿಯಲ್ಲೆ ನಡೆದು ಸುತ್ತಮುತ್ತಲಿನ ವಾತಾವರಣ ವಿಕ್ಷೀಸಿ, ಎಲ್ಲಾ ಆಯಾಮಗಳಲ್ಲಿಯು ತನಿಖೆ ನಡೆಸಿ, ಇನ್ನು ಹೆಚ್ಚಿನ ಮಾಹಿತಿ ಕಲೆಹಾಲು ಸಿಬ್ಬಂದಿಗಳಿಗೆ ಸೂಚಿಸಿದರು.