ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ

ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್, ನಟ, ನಿರ್ದೇಶಕ ಪ್ರಭುದೇವ (Prabhu Deva) ಮೂಲತಃ ಮೈಸೂರಿನವರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೆಂಬಾಳು ಗ್ರಾಮದಲ್ಲಿರುವ ದೇವಸ್ಥಾನ, ಕೆಂಬಾಳು ಗ್ರಾಮದವರಾದ ಪ್ರಭುದೇವ, ತಂದೆ-ತಾಯಿಯವರ ಆಸೆಯಂತೆ ಹುಟ್ಟೂರಿನ ಮಲೈ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ. ಇದಕ್ಕಾಗಿ 25 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಪೂಜೆಯಲ್ಲಿ ಪ್ರಭುದೇವ ಹಾಗೂ ಅವರ ಪತ್ನಿಯೂ ಸಹ ಭಾಗಿ ಆಗಿದ್ದಾರೆ.