
ಕುಂದಾಪುರ: ಮಹಿಳೆಯೊಬ್ಬರು ಹೊಸದಾಗಿ ಖರೀದಿಸಿದ ಜಮೀನಿನ ನೋಂದಾಯಿಸಲು ಹೋಗದ ವೇಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಳ್ಳೂರು ಸಮೀಪ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಬಳ್ಳೂರಿನ ನಿವಾಸಿ ಶ್ರುತಿ (33) ಎಂದು ಗುರುತಿಸಲಾಗಿದೆ. ಶ್ರುತಿ ಮತ್ತು ವಿನಯ್ ಅಂರ್ತಜಾತಿ ವಿವಾಹವಾಗಿದ್ದರು. ಶ್ರುತಿ ಸಾಲಿಗ್ರಾಮದ ಬ್ರಾಹ್ಮಣ ಕುಟುಂಬದವರಾಗಿದ್ದು, ಕಾಲೇಜಿನ ದಿನಗಳಲ್ಲಿ ವಿನಯ್ ಅವರಮ್ ಮೇಲೆ ಪ್ರೀತಿಸಿ ವಿವಾಹವಾಗಿದ್ದರು. ಸದ್ಯ ಬಳ್ಳೂರಿನಲ್ಲಿ ವಾಸವಾಗಿದ್ದರು. ಇವರು ಕೆಲ ದಿನಗಳ ಹಿಂದೆ ಬಳ್ಳೂರಿನ ಸಮೀಪ ಹೊಸದಾಗಿ ಜಾಗವೊಂದನ್ನ ಖರೀದಿ ಮಾಡಿದ್ದರು. ಈ ಸಂಬಂಧವಾಗಿ ಜಮೀನು ನೋಂದಣಿ ಮಾಡಿಸಿಕೊಳ್ಳಲು ಕಚೇರಿಗೆ ಹೋಗಿದ್ದರು.
ಈ ವೇಳೆಯಲ್ಲಿ ಸ್ಕೂಟಿ ಮೇಲೆ ಬಳ್ಳೂರಿಗೆ ಹೋಗಿ ಅಲ್ಲೇ ಸಮೀಪದಲ್ಲಿರುವ ನದಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು. ಕುಂದಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ. ಆದರೆ ಹಣಕಾಸಿನ ವಹಿವಾಟಿನಲ್ಲಿ ಏನೋ ಮೋಸ ನಡೆದಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.