
ಚಿಕ್ಕಮಗಳೂರು, ಏಪ್ರಿಲ್ 17: ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದೆ. ಕಾಡಾನೆಗಳು ಮನೆಯೊಂದರ ಬಳಿ ಬಂದು ಮನೆ ಮುಂದೆ ಹಾಕಿದ್ದ ಶೆಡ್ ಪುಡಿಪುಡಿ ಮಾಡಿವೆ. ದನದ ಕೊಟ್ಟಿಗೆ, ಮನೆ ಹಿಂಭಾಗದ ಕಟ್ಟಡ ಉಡೀಸ್ ಮಾಡಿವೆ. ಬಾಳೆ, ಕಾಫಿ, ಅಡಕೆ ತೋಟವನ್ನು ಕಾಡಾನೆಗಳು ಸಂಪೂರ್ಣ ನಾಶ ಮಾಡಿವೆ. ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ 42 ಕಾಡಾನೆಗಳ ಹಿಂಡು ನಿರಂತರವಾಗಿ ದಾಳಿ ಮಾಡುತ್ತಿದೆ.

