ಹೊನ್ನಾವರ ಡಿಸೆಂಬರ್ 12 : ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬೃಹತ್ ತಗ್ಗು ಗುಂಡಿಯ ಬಗ್ಗೆ ವರದಿ ಮಾಡಲು ನುಡಿಸಿರಿ ವಾಹಿನಿ, ಹೊನ್ನಾವರ ಪ.ಪಂ ಮುಖ್ಯಾಧಿಕಾರಿಗಳನ್ನು ಬೇಟಿ ಮಾಡಿತ್ತು. ಆದ್ರೆ ಸಂಜೆ ಹೊತ್ತಿಗಾಗಲೇ ನುಡಿಸಿರಿ ವಾಹಿನಿ ಕಾಳಜಿಗೆ ಸ್ಪಂದಿಸಿದ ಅಧಿಕಾರಿಗಳು ಕೇವಲ 2 ಗಂಟೆಯಲ್ಲಿ ಗುಂಡಿ ಮುಚ್ಚಿಸುವ ಕಾರ್ಯ ಮಾಡಿದ್ದಾರೆ…
ಈ ತಗ್ಗು ಗುಂಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ತಗ್ಗುಗುಂಡಿಯಲ್ಲಿ ಬಸ್ ಹಾದು ಹೋಗುವಾಗ ಬಸ್‌ನಲ್ಲಿದ್ದವರು ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುತ್ತಿದ್ರು. ದಿನೇ ದಿನೇ ಈ ಹೊಂಡದ ವ್ಯಾಪ್ತಿ ಹೆಚ್ಚಾಗಿ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು…
ಹೌದು… ಹೊನ್ನಾವರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಮುಖ್ಯ ರಸ್ತೆಯಲ್ಲಿ ಬೃಹತ್ ತಗ್ಗು ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತೆ ಬಾಯ್ತೆರೆದು ಕುಳಿತು, ಪ್ರತಿನಿತ್ಯ ಸಂಚರಿಸುವ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿತ್ತು. ಪ್ರತಿ ಮಳೆಗಾಲದಲ್ಲೂ ಕೂಡ ಬಸ್ ನಿಲ್ದಾಣದಲ್ಲಿ ಮಳೆ ನೀರು ನಿಂತು ರಸ್ತೆ ಯಾವುದು ಕೆರೆ ಯಾವುದು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಬಗ್ಗೆ ನುಡಿಸಿರಿ ವಾಹಿನಿ ವರದಿ ಬಿತ್ತರಿಸಿ ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡಿತ್ತು..
ಇದೀಗ ಮಳೆಗಾಲ ಮುಗಿದು 2 ತಿಂಗಳು ಕಳೆದ್ರೂ ಕೂಡ ಹೊನ್ನಾವರ ಜನತೆಗೆ ರಸ್ತೆಯ ಗುಂಡಿಗಳಿಂದ ಮುಕ್ತಿ ಸಿಕ್ಕಿಲ್ಲ. ಹೊನ್ನಾವರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಮುಖ್ಯ ರಸ್ತೆಯಲ್ಲಿ ದೊಡ್ಡ ತಗ್ಗು ಗುಂಡಿ ಬಿದ್ದಿದ್ದರು ಕೂಡ ಸರಿಪಡಿಸುವ ಕೆಲಸವಾಗಿರಲಿಲ್ಲ. ಈ ಬಗ್ಗೆ ನುಡಿಸಿರಿ ವಾಹಿನಿ ಸಾರಿಗೆ ಅಧಿಕಾರಿಗಳನ್ನು ಕೇಳಿದಾಗ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಪ.ಪಂ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ರು…
ಹೀಗಾಗಿ ನುಡಿಸಿರಿ ವಾಹಿನಿ ಹೊನ್ನಾವರ ಪ.ಪಂ ಮುಖ್ಯಾಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿತ್ತು. ಈ ಬಗ್ಗೆ ಮಾತನಾಡಿದ ಹೊನ್ನಾವರ ಪ.ಪಂ ಮುಖ್ಯಾಧಿಕಾರಿ ಯೇಸು ಎಸ್. ಬೆಂಗಳೂರು ನುಡಿಸಿರಿ ವಾಹಿಯೊಂದಿಗೆ ಮಾತನಾಡಿ, ಕಳೇದ ಎರಡು ತಿಂಗಳ ಹಿಂದೆ ಸುರಿದ ಬಾರಿ ಮಳೆಗೆ ಪ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದವು. ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ರಸ್ತೆ ಗುಂಡಿಗಳನ್ನು ಸರಿಪಡಿಸಲು 5ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನೂ ಹೊನ್ನಾವರ ಬಸ್ ನಿಲ್ದಾಣದ ಮುಂಭಾಗದಲ್ಲಿನ ಗುಂಡಿ ಬಗ್ಗೆ ನುಡಿಸಿರಿ ವಾಹಿನಿ ನಮ್ಮ ಗಮನಕ್ಕೆ ತಂದಿದೆ. ಈ ಕೂಡಲೇ ಗುಂಡಿ ಸರಿಪಡಿಸುವುದಾಗಿ ಹೇಳಿದ್ರು…
ಇನ್ನೂ ಈ ಬಗ್ಗೆ ನುಡಿಸಿರಿ ವಾಹಿನಿ ಅಧಿಕಾರಿಗಳ ಗಮನಕ್ಕೆ ತಂದ ಕೇವಲ 2 ಗಂಟೆಗಳಲ್ಲಿ ಗುಂಡಿ ಮುಚ್ಚಿಸಿ ವರದಿಗೆ ಸ್ಪಂದಿಸಿದ್ದಾರೆ. ಒಟ್ನಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಾಯ್ತೆರೆದು ಕುಳಿತಿದ್ದ ತಗ್ಗು ಗುಂಡಿಯಿಂದ ಪ್ರಯಾಣಿಕರಿಗೆ ಮುಕ್ತಿ ಸಿಕ್ಕಿದ್ದು, ಪಟ್ಟಣದ ಹಲವೆಡೆ ಹಾಳಾಗಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ…