ಗಣೇಶ ಚತುರ್ಥಿ ಹಿನ್ನೆಲೆ ಶನಿವಾರದ ಬದಲು ಗುರುವಾರವೇ ಹೊನ್ನಾವರದ ವಾರದ ಸಂತೆ

ಹೊನ್ನಾವರ ಸೆ.04 : ಪ್ರತಿ ಶನಿವಾರ ನಡೆಯುತ್ತಿದ್ದ ಹೊನ್ನಾವರದ ವಾರದ ಸಂತೆಯನ್ನು ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಒಂದು ದಿನ ಮುಂಚಿತವಾಗಿ ಅಂದ್ರೆ ಗುರುವಾರ ನಡೆಸಲು ತೀರ್ಮಾನಿಸಲಾಗಿದೆ.

ಪ್ರತಿ ಶನಿವಾರ ಹೊನ್ನಾವರ ಪಟ್ಟಣದ ಬಂದರ್‌ನಲ್ಲಿ ಸಂತೆ ನಡೆಯೋದು ನಿಮ್ಗೆಲ್ಲಾ ಗೊತ್ತೇ ಇದೆ. ಈ ವಾರವೂ ಶನಿವಾರವೇ ವಾರದ ಸಂತೆ ನಡೆಯುತ್ತೇ ಅಂತ ಹೊನ್ನಾವರಕ್ಕೆ ಬಂದು ನಿರಾಶರಾಗಬೇಡಿ. ಯಾಕಂದ್ರೆ ಈ ವಾರ ವಾರದ ಸಂತೆ ಶನಿವಾರದ ಬದಲು ನಾಳೆ ಗುರುವಾರ ನಡೆಯಲಿದೆ. ಇದಕ್ಕೆಲ್ಲಾ ಕಾರಣ ಗಣೇಶ ಚತುರ್ಥಿ..

ಶನಿವಾರ ಗಣೇಶ ಚತುರ್ಥಿ ಹಬ್ಬ ಆಚರಿಸಲಿದ್ದು, ಶುಕ್ರವಾರ ಗೌರಿ ಪೂಜೆ ನಡೆಯಲಿದೆ. ಹೀಗಾಗಿ ಎಲ್ಲರೂ ಗುರವಾರವೇ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡ್ತಾರೆ. ಇದೇ ಕಾರಣಕ್ಕೆ ಗ್ರಾಹಕರಿಗೆ ಅನುಕೂಲವಾಗಲೆಂದು ಗುರುವಾರವೇ ವಾರದ ಸಂತೆ ನಡೆಸಲು ತೀರ್ಮಾನಿಸಲಾಗಿದೆ..

ಈ ವಿಚಾರವಾಗಿ ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿದ ಹೊನ್ನಾವರ ಪ.ಪಂ ಮುಖ್ಯಾಧಿಕಾರಿ ಏಸು.ಎಸ್‌ ಬೆಂಗಳೂರು, ಪಟ್ಟಣದ ಬಂದರ್ ನಲ್ಲಿ ಪ್ರತಿ ಶನಿವಾರದಂದು ನಡೆಯುತ್ತಿದ್ದ ವಾರದ ಸಂತೆಯನ್ನು ಗುರುವಾರದಂದು ನಡೆಸುವುದಾಗಿ ತೀರ್ಮಾನಿಸಲಾಗಿದೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದ್ರು..

ಒಟ್ನಲ್ಲಿ ಗೌರಿ ಗಣೇಶ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ತಾಲೂಕಿನ ಜನ ಹಬ್ಬ ಮುಗಿದ್ಮೇಲೆ ಸಂತೆ ಇದೆ, ಹಬ್ಬಕ್ಕೂ ಮುನ್ನ ಸಂತೆ ನಡೆದಿದ್ರೆ ಎಲ್ಲಾ ಸಾಮಾಗ್ರಿಗಳನ್ನು ಸಂತೆಯಲ್ಲೇ ಖರೀದಿಸಬಹುದಿತ್ತು ಎಂದು ಬೇಸರ ಪಟ್ಟುಕೊಂಡಿದ್ರು. ಆದ್ರಿಗ ಗುರವಾರವೇ ವಾರದ ಸಂತೆಯನ್ನು ನಡೆಸಲು ಹೊನ್ನಾವರ ಪ.ಪಂ ಅನುಕೂಲ ಮಾಡಿಕೊಟ್ಟಿದೆ..