ಉಪ್ಪೋಣಿ ಫೀಡರ್ ವ್ಯಾಪ್ತಿಯಲ್ಲಿ ತಾತ್ಕಾಲಿಕ ವಿದ್ಯುತ್ ವ್ಯತ್ಯಯ – ಗ್ರಾಹಕರಿಗೆ ಸೂಚನೆ

ಹೊನ್ನಾವರ ಉಪವಿಭಾಗದ ಗೇರುಸೊಪ್ಪ ಶಾಖಾ ವ್ಯಾಪ್ತಿಯ 11 ಕೆವಿ ಉಪ್ಪೋಣಿ ಫೀಡರ್‌ನಲ್ಲಿ ನಿರ್ವಹಣಾ ಕೆಲಸ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, 06 ಆಗಸ್ಟ್ 2025, ಬುಧವಾರ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಈ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.

ಈ ಅವಧಿಯಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಗ್ರಾಹಕರು ಸಹಕಾರ ನೀಡಬೇಕು ಎಂಬಂತೆ, ಹೊನ್ನಾವರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರು ವಿನಂತಿಸಿದ್ದಾರೆ.

ಗ್ರಾಹಕರ ಸಹಕಾರಕ್ಕೆ ಇಲಾಖೆ ಕೃತಜ್ಞತೆ ಸಲ್ಲಿಸುತ್ತಿದೆ.