ಹೊನ್ನಾವರದ ಕಡತೋಕಾ ಗ್ರಾಮದ ದಿ. ಸೂರ್ಯನಾರಾಯಣ ಹೆಗ್ಡೆ ಮತ್ತು ಶ್ರಿಮತಿ ಸವಿತಾ ಹೆಗ್ಡೆರವರ ಪುತ್ರನಾದ ಎಚ್ ಎಸ್ ವಿಶಾಲ್ ಅವರು CA ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ಎಚ್ ಎಸ್ ವಿಶಾಲ್ ಅವರು ಪ್ರಾಥಮಿಕ ಶಿಕ್ಷಣವನ್ನು ಸ. ಹಿ. ಪ್ರಾ. ಶಾಲೆ, ಕಡತೋಕದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಪಡೆದು, ನಂತರ ಕೊಂಕಣ ಎಜುಕೇಶನ್ ಟ್ರಸ್ಟ್ ನ C.V.S.K ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭಾಸ ಮುಗಿಸಿದ್ದು ಪರೀಕ್ಷೆಯಲ್ಲಿ 97.6% ಅಂಕಗಳೊಂದಿಗೆ ಉತ್ತೀರ್ಣರಾಗಿ, ನಂತರ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ಪಿ. ಯು ಕಾಲೇಜ್ನಲ್ಲಿ ಪಿಯುಸಿ ಪರೀಕ್ಷೆಯಲ್ಲಿ 97.5% ಅಂಕಗಳನ್ನು ಗಳಿಸಿ ಶ್ರೇಷ್ಠ ಶೈಕ್ಷಣಿಕ ಸಾಧನೆ ಮಾಡಿ ನಂತರದ ವರ್ಷಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಪದವಿ ಓದಿ, ಮೊದಲ ಪ್ರಯತ್ನದಲ್ಲೇ CA ಫೈನಲ್ ಪರೀಕ್ಷೆ ಉತ್ತೀರ್ಣವಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಮಂಗಳೂರಿನ ಪ್ರಸನ್ನ ಶೆಣೈ & ಕಂಪನಿ, ಚಾರ್ಟರ್ಡ್ ಅಕೌಂಟೆಂಟ್‌ಸ್ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ನಡೆಸುತ್ತಿದ್ದಾರೆ


