ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೃಷಿ ಜಮೀನಿಗೆ ಹೋಗುವ ದಾರಿ ವಿಚಾರದಲ್ಲಿ ಜಟಾಪಟಿ

ಹೊನ್ನಾವರ : ತಾಲೂಕಿನ ಕೆಳಗಿನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಅನಾಧಿಕಾಲದಿಂದಲೂ ಓಡಾಡಲು ಹಾಗೂ ಕೃಷಿ ಕೆಲಸಕ್ಕೆ ಅನುಕೂಲವಾಗಿದ್ದ ದಾರಿಯನ್ನು ಬಂದ ಮಾಡದಂತೆ ಕೆಳಗಿನೂರು ಗ್ರಾ.ಪಂಚಾಯತ್‌ನ ನೂರಾರು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ತಾರಕಕ್ಕೇರಿದ್ದರಿಂದ, ಕೂಡಲೇ ಸ್ಥಳಕ್ಕೆ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರು ಆಗಮಿಸಿದ್ರು..

ತಾಲೂಕಿನ ಮಂಕಿ ಹೋಬಳಿಯ ಕೆಳಗಿನೂರು ಗ್ರಾ.ಪಂ ವ್ಯಾಪ್ತಿಯ ಹೊಳ್ಳಾಕುಳಿಯ ಸರ್ವೇ ನಂ.38ರ ಜಾಗದಲ್ಲಿರುವ ಕೃಷಿಭೂಮಿಗೆ ಹೋಗುವ ಈ ದಾರಿಯಲ್ಲಿ ಅನಾಧಿಕಾಲದಿಂದಲೂ ಇಲ್ಲಿನ ಗ್ರಾಮಸ್ಥರು, ಹಾಗೂ ಸಾರ್ವಜನಿಕರು, ಶಾಲಾ ಮಕ್ಕಳು ಇದೇ ದಾರಿಯನ್ನು ಅವಲಂಬಿಸಿದ್ದಾರೆ. ಇನ್ನೂ ಈ ದಾರಿಯು ಖಾಸಗಿ ಮಾಲಕರದ್ದಾಗಿದ್ದು, ಜಾಗದ ಮಾಲಿಕರು ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡದೇ ಏಕಾಏಕಿ ದಾರಿಯನ್ನು ಬಂದ ಮಾಡಿದ್ದರಿಂದ ಕೃಷಿ ಚಟುವಟಿಕೆಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗ್ತಿರೋ ಬಗ್ಗೆ ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ರು….

ಈ ವೇಳೆ ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತೆ ಡಾ. ನಯನಾ ಎಸ್. ಇದು ಈ ಜಾಗದ ವಿಷಯ ಕೋರ್ಟನಲ್ಲಿರುವುದರಿಂದ ಏನೂ ಕ್ರಮ ಕೈಗೊಳ್ಳೋಕೆ ಆಗುವುದಿಲ್ಲ. ಮತ್ತು ಏನು ಭರವಸೆ ನೀಡೋಕು ಆಗುವುದಿಲ್ಲ. ಒಂದು ದಿನ ಕಾಲಾವಕಾಶ ನೀಡಿ ಅದರ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ರು. ಆದ್ರೀಗ ಸಹಾಯಕ ಆಯುಕ್ತರ ಭರವಸೆಯಂತೆ ಒಂದು ದಿನ ಕಳೆದ್ರೂ ಕೂಡ ಯಾವುದೇ ವ್ಯತ್ಯಾಸ ಕಾಣದೇ ಇದ್ದಾಗ ರೈತರು ಹಾಗೂ ಸಾರ್ವಜನಿಕರು ಸ್ಥಳದಲ್ಲೇ ಕೃಷಿ ಯಂತ್ರೋಪಕರಣಗಳನ್ನು ನಿಲ್ಲಿಸಿ ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಹಾಗೂ ತಹಶಿಲ್ದಾರ ಬರುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ರು…

ಇನ್ನೂ ಸ್ಥಳಕ್ಕಾಗಮಿಸುವಂತೆ ಆಯುಕ್ತರಿಗೆ ಹಾಗೂ ತಹಶೀಲ್ದಾರರಿಗೆ ಕರೆ ಮಾಡಿದ್ರು. ಈ ವೇಳೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತೆ ನಯನಾ ಎಸ್. ಹಾಗೂ ತಹಶೀಲ್ದಾರ ರವಿರಾಜ್‌ ದೀಕ್ಷಿತ್‌ ಕೃಷಿ ಭೂಮಿಗೆ ಹೋಗುವ ಜಾಗದ ಹಾಗೂ ಕೃಷಿಭೂಮಿಯನ್ನು ಪರಿಶೀಲನೆ ನಡೆಸಿದ್ರು. ಈ ವೇಳೆ ಕೆಲ ಕಾಲ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ಉಂಟಾಯ್ತು..

ಇನ್ನೂ ಈ ವೇಳೆ‌ ಸಹಾಯಕ ಆಯುಕ್ತೆ ಡಾ. ನಯನಾ ಎಸ್ ಮಾತನಾಡಿ, ಜಾಗದ ಕೇಸ್‌ ಸದ್ಯ ಕೋರ್ಟ್‌ನಲ್ಲಿರುವುದರಿಂದ ಏನು ಮಾಡೋಕೆ ಆಗುದಿಲ್ಲ. ಸದ್ಯ ಕೃಷಿ ಚಟುವಟಿಕೆ ಆರಂಭಿಸುವುದಕ್ಕೆ ಈ ದಾರಿ ಬಿಟ್ಟು ಬೇರೆ ದಾರಿಯ ಮೂಲಕ ವ್ಯವಸ್ಥೆ ಮಾಡಕೊಡ್ತಿವಿ. ಕೃಷಿ ಯಂತ್ರೋಪಕರಣಗಳ‌ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವದೇ ಅಡ್ಡಿಯಾಗದ ರೀತಿಯಲ್ಲಿ ಖುದ್ದಾಗಿ ನಾನು ಮತ್ತು ತಹಶಿಲ್ದಾರ ಹಾಗೂ ಪೋಲಿಸರ ಸಮ್ಮುಖದಲ್ಲಿ ವ್ಯವಸ್ಥೆ ಮಾಡುಕೊಡುವುದಾಗಿ ಭರವಸೆ ನೀಡಿದ್ರು..

ಆದ್ರೆ ಅಧಿಕಾರಿಗಳ ಈ ಭರವಸೆಗೆ ಒಪ್ಪದ ರೈತರು ನಮಗೆ ಇದೇ ರಸ್ತೆಯಲ್ಲಿ ಓಡಾಡಲು ಶಾಶ್ವತ ಪರಿಹಾರ ಕಲ್ಪಿಸುವಂತೆ ಪಟ್ಟು ಹಿಡಿದ್ರು. ಒಟ್ಟು 120 ಎಕರೆ ಕೃಷಿ ಜಮೀನಿನಲ್ಲಿ ದುಡಿದು ಜೀವನ ಮಾಡೋ ರೈತರಿಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದ್ರು. ಜೊತೆಗೆ ಯಾವುದೇ ಅಪರಾಧ ಮಾಡದ ಕೆಲವು ಜನರ ಮೇಲೆ ಕೇಸ್‌ ದಾಖಲು ಮಾಡಿದ್ದರ ಬಗ್ಗೆ ಕೂಡ ಅಧಿಕಾರಿಗಳ ಜೊತೆಗೆ ಚರ್ಚಿಸಲಾಯ್ತು…

ಇನ್ನೂ ಇದೇ ವೇಳೆ ನುಡಿಸಿರಿಯೊಂದಿಗೆ ಮಾತನಾಡಿದ ಕೆಲ ರೈತರು, ಅನಾಧಿಕಾಲದಿಂದಲೂ ಇರುವ ಈ ದಾರಿಯನ್ನು ನಮಗೆ ಶಾಶ್ವತವಾಗಿ ಅನುಕೂಲವಾಗವಂತೆ ಪರಿಹಾರ ನೀಡಬೇಕು ಮತ್ತು ಕೃಷಿಯನ್ನೇ ನಂಬಿ ಜೀವನ ಮಾಡೋ ನಮಗೆ ತೀವ್ರ ತೊಂದರೆಯಾಗ್ತಿದೆ. ಹೀಗಾಗಿ ಸಂಭಂದಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕೃಷಿ ಚಟುವಟಿಕೆ ಮಾಡಲು ಬೇರೆ ದಾರಿ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ರು. ಆದ್ರೆ ನಮಗೆ ಬೇರೆ ದಾರಿ ಬೇಡ ಇದೇ ದಾರಿಯನ್ನೇ ನೀಡಿ ಎಂದು ಒತ್ತಾಯಿಸಿದ್ರು…

ಈ ವೇಳೆ ಸಹಾಯಕ ಆಯುಕ್ತರ ಈ ಭರವಸೆ ಮಾತಿಗೆ ರೈತರು ಒಪ್ಪದ ಬೆನ್ನಲ್ಲೇ ಕೆಲಹೊತ್ತು ರೈತರು ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ರೈತರು ಅಧಿಕಾರಿಗಳ ವಾಹನ ತಡೆದು ನ್ಯಾಯಕ್ಕಾಗಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು..ಇನ್ನೂ ಸ್ಥಳಕ್ಕಾಗಮಿಸಿದ ಎಸಿ ಹಾಗೂ ತಹಶೀಲ್ದಾರ ಬಂದಿದ್ದಕ್ಕೆ ನೆಪಮಾತ್ರಕ್ಕೆ ಮಾಲಿಕರಾದ ತಿಮ್ಮಪ್ಪ ರಾಮಗೌಡ ಅವರ ಮಗಳು ಕವನಾಗೌಡ ಮೂಲಕವಾಗಿ ರೈತರು ತಮ್ಮ ಯಂತ್ರೋಪಕರಣಗಳನ್ನು ಅದೇ ದಾರಿಯಲ್ಲಿ ತೆಗೆದುಕೊಂಡು ಹೋಗಲಿ ಅದಕ್ಕೇನು ಅಭ್ಯಂತರವಿಲ್ಲ ಎಂದು ಹೇಳಿದ್ದರಿಂದ ರೈತರು ತಮ್ಮಕೃಷಿ ಯಂತ್ರೋಪಕರಣಗಳನ್ನು ಅದೇ ದಾರಿಯಲ್ಲಿ ಇಳಿಸಿ, ಗದ್ದೆ ನಾಟಿ ಮಾಡಲು ಮುಂದಾದರು..

ಒಟ್ನಲ್ಲಿ ಅನಾಧಿಕಾಲದಿಂದಲೂ ಇರುವ ದಾರಿಯನ್ನು ಶಾಶ್ವತವಾಗಿ ಹಾಗೂ ರೈತರ ಹಿತಾಸಕ್ತಿಗಾಗಿ ನೀಡುವಂತೆ ರೈತರು ಹಾಗೂ ಸಾರ್ವಜನಿಕರು  ಅಧಿಕಾರಿಗಳಿಗೆ ಆಗ್ರಹಿಸಿದ್ರು. ಇನ್ನೂ ಈ ಜಾಗದ ಕೇಸ್‌ ಸದ್ಯ ಕೋರ್ಟನಲ್ಲಿರುವುರಿಂದ ಯಾವುದೇ ಶಾಶ್ವತ ಪರಿಹಾರ ನೀಡಲು ಆಗುವುದಿಲ್ಲ ಎಂದು ಸಹಾಯಕ ಆಯುಕ್ತರು ರೈತರಿಗೆ ತಿಳಿಸಿದ್ದು, ಸದ್ಯ ಕೃಷಿ ಚಟುವಟಿಕೆ ಆರಂಭಿಸಲು ಬೇರೆ ದಾರಿ ವ್ಯವಸ್ಥೆ ಕಲ್ಪಿಸುವಂತೆ ಭರವಸೆ ನೀಡಿದ್ದಾರೆ. ಆದ್ರೆ ರೈತರು ಮಾತ್ರ ಬೇರೆ ದಾರಿ ಬೇಡ ತಾತ್ಕಾಲಿಕವಾಗಿ ಇದೇ ದಾರಿಯನ್ನು ನೀಡುವಂತೆ ಆಗ್ರಹಿಸಿದ್ರು..

ಇನ್ನಾದರೂ ಸಂಭಂದಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಶೀಲನೆ ನಡೆಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಕೊಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ…

ರಾಮಕೃಷ್ಣ ಜೊತೆಗೆ ವಿರೇಶ ನುಡಿಸಿರಿ ನ್ಯೂಸ್‌, ಹೊನ್ನಾವರ