ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ನಾಯ್ಕ್

ಅಂಕೋಲಾ: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಘಟಕದ ಅಧ್ಯಕ್ಷ ಎನ್ ಎಸ್ ಹೆಗಡೆ ವಿವಿಧ ತಾಲೂಕುಗಳ ಮಂಡಲ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ನಿಯುಕ್ತಿ ಮಾಡಿ ಆದೇಶ ಹೊರಡಿಸಿದ್ದು, ಅಂಕೋಲಾ ತಾಲೂಕು ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀಧರ ನಾಯ್ಕ್ ಅವರನ್ನು ನೇಮಿಸಿದ್ದಾರೆ.

ಅಂಕೋಲಾ ಮಂಡಲ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ ಅವರನ್ನು ಹಾಗೂ ಇನ್ನೋರ್ವ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಾಂತ ನಾಯ್ಕ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಶ್ರೀಧರ ನಾಯ್ಕ ಅಂಕೋಲಾ ಪುರಸಭೆಯ ಸದಸ್ಯರಾಗಿದ್ದು ಅವರ ಆಯ್ಕೆಯ ಮೂಲಕ ಯುವಕರಿಗೆ ಪ್ರಾಧ್ಯಾನತೆ ನೀಡಿದಂತಾಗಿದೆ. ಸದಾ ಹಸನ್ಮುಖರಾಗಿರುವ ಶ್ರೀಧರ ನಾಯ್ಕ ವಾರ್ಡಿನ ಮತದಾರರೊಂದಿಗೆ ನಿರಂತರವಾಗಿ ಸಂಪರ್ಕವಿಟ್ಟುಕೊಂಡು ಉತ್ತಮ ಹೆಸರುಗಳಿಸಿದ್ದಾರೆ. ಈ ಹಿಂದೆ ಅಂಕೋಲಾ ನಗರ ಶಕ್ತಿ ಕೇಂದ್ರದ ಪ್ರಮುಖರಾಗಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತರಾಗಿ ಗುಂಪುಗಾರಿಕೆ, ವೈಯಕ್ತಿಕ ಹಿತಾಸಕ್ತಿಗಳಿಂದ ಸದಾ ದೂರವಿರುವ ಶ್ರೀಧರ ನಾಯ್ಕರ ಆಯ್ಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ರೂಪಾಲಿ ನಾಯ್ಕ ಹೆಚ್ಚಿನ ಒಲವು ತೋರಿದ್ದರು ಎನ್ನಲಾಗಿದೆ.