ರಾಜ್ಯ ಮುಕ್ತ ಯೋಗಾಸನ ಸ್ಪರ್ಧೆ-ಚೈತನ್ಯ ವಿಕಸನ ಯೋಗ ಕೇಂದ್ರದ ವಿದ್ಯಾರ್ಥಿಗಳ ಸಾಧನೆ

ಬೆಂಗಳೂರಿನಲ್ಲಿ ನಡೆದ ರಾಜ್ಯ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಹೊನ್ನಾವರದ ಚೈತನ್ಯ ವಿಕಸನ ಯೋಗ ಕೇಂದ್ರದ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಸ್ಪರ್ಧೆಯಲ್ಲಿ ಚೈತನ್ಯ ವಿಕಸನ ಯೋಗ ಕೇಂದ್ರದ ಆರು ಯೋಗಪಟುಗಳು ಭಾಗವಹಿಸಿದ್ದರು. ಆರು ವರ್ಷ ವಯೋಮಾನದಲ್ಲಿ ನಮೃತಾ ಗೌಡ ದ್ವಿತೀಯ ಸ್ಥಾನ, 8 ವರ್ಷದ ವಯೋಮಾನದಲ್ಲಿ ಮಾನ್ವಿ ನಾಯಕ್ 4ನೇ ಸ್ಥಾನ ಹಾಗೂ 20 ವರ್ಷದ ಮೇಲಿನ ವಯೋಮಾನದಲ್ಲಿ ಮಂಜುನಾಥ್ ಗೌಡ ಕವಲಕ್ಕಿ ನಾಲ್ಕನೇ ಸ್ಥಾನ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಯೋಗ ತರಬೇತುದಾರರಾದ ರಾಜೇಶ್ವರಿ ಹೆಗಡೆ ಅವರು ರಾಜ್ಯಮಟ್ಟದಲ್ಲಿ ಯೋಗ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ತಾಲೂಕಿನ ಜನತೆ ಅಭಿನಂದನೆ ಸಲ್ಲಿಸಿದ್ದಾರೆ..