ಚಿನ್ನದ ದರ ಮತ್ತೆ ಮೆಟ್ಟಿಲೇರಿತು – ವಾರಾಂತ್ಯದಲ್ಲಿ ಬಂಪರ್ ಏರಿಕೆ!

ಬೆಂಗಳೂರು, ಆಗಸ್ಟ್ 3: ಈ ವಾರ ಸಾಕಷ್ಟು ಇಳಿಕೆ ಕಂಡಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ ಭರ್ಜರಿ ಏರಿಕೆ ಕಂಡಿದೆ. ಗ್ರಾಮ್​​ಗೆ ಬರೋಬ್ಬರಿ 140 ರೂನಷ್ಟು ಚಿನ್ನದ ಬೆಲೆ ಏರಿದೆ. ಆಭರಣ ಚಿನ್ನದ ಬೆಲೆ ದೆಹಲಿಯಲ್ಲಿ 9,300 ರೂ ಗಡಿ ದಾಟಿದೆ. ಅಪರಂಜಿ ಚಿನ್ನವೂ 10,100 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಹಲವೆಡೆ ಬೆಲೆ ಏರಿದೆ. ಇನ್ನು, ಬೆಳ್ಳಿ ಬೆಲೆಯಲ್ಲಿ ಈ ವಾರಾಂತ್ಯದಲ್ಲಿ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,300 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 3ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 76,010 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,130 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,130 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,900 ರೂ
  • ಚೆನ್ನೈ: 92,900 ರೂ
  • ಮುಂಬೈ: 92,900 ರೂ
  • ದೆಹಲಿ: 93,050 ರೂ
  • ಕೋಲ್ಕತಾ: 92,900 ರೂ
  • ಕೇರಳ: 92,900 ರೂ
  • ಅಹ್ಮದಾಬಾದ್: 92,950 ರೂ
  • ಜೈಪುರ್: 93,050 ರೂ
  • ಲಕ್ನೋ: 93,050 ರೂ
  • ಭುವನೇಶ್ವರ್: 92,900 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,350 ರಿಂಗಿಟ್ (88,720 ರುಪಾಯಿ)
  • ದುಬೈ: 3,740 ಡಿರಾಮ್ (88,840 ರುಪಾಯಿ)
  • ಅಮೆರಿಕ: 1,045 ಡಾಲರ್ (91,170 ರುಪಾಯಿ)
  • ಸಿಂಗಾಪುರ: 1,346 ಸಿಂಗಾಪುರ್ ಡಾಲರ್ (91,120 ರುಪಾಯಿ)
  • ಕತಾರ್: 3,755 ಕತಾರಿ ರಿಯಾಲ್ (89,870 ರೂ)
  • ಸೌದಿ ಅರೇಬಿಯಾ: 3,820 ಸೌದಿ ರಿಯಾಲ್ (88,840 ರುಪಾಯಿ)
  • ಓಮನ್: 396.50 ಒಮಾನಿ ರಿಯಾಲ್ (89,850 ರುಪಾಯಿ)
  • ಕುವೇತ್: 304.20 ಕುವೇತಿ ದಿನಾರ್ (86,900 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,300 ರೂ
  • ಚೆನ್ನೈ: 12,300 ರೂ
  • ಮುಂಬೈ: 11,300 ರೂ
  • ದೆಹಲಿ: 11,300 ರೂ
  • ಕೋಲ್ಕತಾ: 11,300 ರೂ
  • ಕೇರಳ: 12,300 ರೂ
  • ಅಹ್ಮದಾಬಾದ್: 11,300 ರೂ
  • ಜೈಪುರ್: 11,300 ರೂ
  • ಲಕ್ನೋ: 11,300 ರೂ
  • ಭುವನೇಶ್ವರ್: 12,300 ರೂ
  • ಪುಣೆ: 11,300