ಗಾಂಜಾ ಮಾರಾಟ ಮಾಡಲು ಬಂದ ವ್ಯಕ್ತಿಯ ಬಂಧನ

ಶಿರಸಿ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯ ಗಣೇಶ ನಗರ ಬಸ್‌ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿತನಾದ ಅಬ್ದುಲ್‌ ರಜಾಕ್‌ ಎಂಬಾತನನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಹಾವೇರಿ ನಿವಾಸಿಯಾಗಿರುವ ಆರೋಪಿತನಿಂದ 108 ಗ್ರಾಂ ತೂಕದ 6000ರೂ ಮೌಲ್ಯದ ಗಾಂಜಾ ಪದಾರ್ಥವನ್ನು ವಶಪಡಿಸಿಕೊಂಡು, ಆರೋಪಿತನ ಮೇಲೆ ಎನ್.ಡಿ.ಪಿ.ಎಸ್‌ ಕಾಯಿದೆಯ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಶಿರಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..