ಮನೆಯಲ್ಲಿ ನಿಲ್ಲಿಸಿದ್ದ ಬೈಕನ್ನು ಎಗರಿಸಿದ ಖದೀಮರು.!

ಸಿದ್ದಾಪುರ: ಮನೆ ಎದುರಿನ ಅಂಗಳದಲ್ಲಿ ನಿಲ್ಲಿಸಿಟ್ಟಿದ್ದ ಬೈಕ್ ಒಂದನ್ನು ಕಳ್ಳರು ಕದ್ದೊಯ್ದ ಘಟನೆ ತಾಲೂಕಿನ ಬೇಡ್ಕಣಿಯಲ್ಲಿ ನಡೆದಿದೆ. ಈರಪ್ಪ ಚೌಡಾ ನಾಯ್ಕ ನೀಲಿ ಬಣ್ಣದ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಮನೆಯ ಅಂಗಳದಲ್ಲಿ ಎಂದಿನಂತೆ ನಿಲ್ಲಿಸಿಟ್ಟಿದ್ದರು. ಕಳ್ಳರು ವಾಹನವನ್ನು ಕಳವು ಮಾಡಿದ್ದು, ಕೆಎ-31 ಇಸಿ-0630 ನಂಬರಿನ ಬೈಕ್ ಪತ್ತೆ ಮಾಡಿಕೊಡುವಂತೆ ಈರಪ್ಪ ನಾಯ್ಕ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.