ಭಟ್ಕಳ​ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕೇಸ್​: ಆರೋಪಿಯ ಅಡಗುತಾಣ ಪತ್ತೆ

ಕಾರವಾರ, ಜುಲೈ 13: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳ  ಪಟ್ಟಣವನ್ನು ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಬಂದ ಪ್ರಕರಣದ ತನಿಖೆಯನ್ನು ಭಟ್ಕಳ ಮತ್ತು ಕೇರಳ ಪೊಲೀಸರು ಜಂಟಿಯಾಗಿ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿ ಅಡಗಿಕೊಂಡಿರುವ ತಾಣ ಗೊತ್ತಾಗಿದೆ. ಭಟ್ಕಳ್​ ಸ್ಫೋಟಿಸುವುದಾಗಿ ಇ-ಮೇಲ್​ ಸಂದೇಶ ಕಳುಹಿಸಿದ್ದ ಆರೋಪಿ ಮೈಸೂರಿನಲ್ಲಿ ಅಡಗಿಕೊಂಡಿದ್ದಾನೆ ಎಂಬುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.ಕಾರವಾರ, ಜುಲೈ 13: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳ ಪಟ್ಟಣವನ್ನು ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಬಂದ ಪ್ರಕರಣದ ತನಿಖೆಯನ್ನು ಭಟ್ಕಳ ಮತ್ತು ಕೇರಳ ಪೊಲೀಸರು ಜಂಟಿಯಾಗಿ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿ ಅಡಗಿಕೊಂಡಿರುವ ತಾಣ ಗೊತ್ತಾಗಿದೆ. ಭಟ್ಕಳ್​ ಸ್ಫೋಟಿಸುವುದಾಗಿ ಇ-ಮೇಲ್​ ಸಂದೇಶ ಕಳುಹಿಸಿದ್ದ ಆರೋಪಿ ಮೈಸೂರಿನಲ್ಲಿ ಅಡಗಿಕೊಂಡಿದ್ದಾನೆ ಎಂಬುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

ಮೈಸೂರು, ಬಳ್ಳಾರಿ, ಕೇರಳ ಸೇರಿದಂತೆ ವಿವಿಧಡೆ ಬಾಂಬ್ ಸ್ಫೋಟಿಸುವುದಾಗಿ ಆರೋಪಿ, ಈ ಹಿಂದೆ ಬೆದರಿಕೆ ಸಂದೇಶ ಕಳುಹಿಸಿದ್ದನಂತೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿ ಅಡಗಿರುವ ಸ್ಥಳ ಗೊತ್ತಾಗಿದೆ.

ಇನ್ನು, ಆರೋಪಿ ಇ-ಮೇಲ್​ ಸಂದೇಶವನ್ನು ತಮಿಳುನಾಡಿನ ಕಣ್ಣನ್ ಎಂಬುವರ ಮೊಬೈಲ್​ನಿಂದ ಕಳುಹಿಸಿದ್ದಾನೆ. ಹಾಗಿದ್ದರೆ ಆರೋಪಿಗೆ ಕಣ್ಣನ್​ ಅವರ ಮೊಬೈಲ್​ ಹೇಗೆ ಸಿಕ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಪೊಲೀಸರು ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರು ಸೋಮವಾರ (ಜು.14) ಆರೋಪಿಯನ್ನು ವಶಕ್ಕೆ ಪಡೆದು ಮೈಸೂರಿನಿಂದ ಕಾರವಾರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಾರಾಯಣ್ ಪ್ರಕರಣದ ತನಿಖಾ ನೇತೃತ್ವ ವಹಿಸಿದ್ದಾರೆ.

ಆರೋಪಿ ಜುಲೈ 10 ರ ಬೆಳಗ್ಗೆ ಎರಡು ಬಾರಿ ಇ-ಮೇಲ್​ ಸಂದೇಶವನ್ನು ಕಳುಹಿಸಿದ್ದನು. ಮೊದಲ ಇ-ಮೇಲ್​ ಸಂದೇಶದಲ್ಲಿ ‘ವಿ ವಿಲ್​ ಪ್ಲಾಂಟ್​ ಬಾಂಬ್​ ಇನ್​ ಭಟ್ಕಳ್​ ಟೌನ್​’ ಎಂದು ಸಂದೇಶ ಕಳುಹಿಸಿದ್ದನು. ನಂತರ ‘ಆಲ್​ ದ ಬಾಂಬ್​ ವಿಲ್​ ಬ್ಲಾಸ್ಟ್​ ಇನ್​​ 24 ಹಾರ್ಸ್​’ ಎಂದು ಸಂದೇಶ ಕಳುಹಿಸಿದ್ದನು. ಈ ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣೆ ಪಿಎಸ್​ ನವೀನ್ ನಾಯ್ಕ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.