
ಹೊನ್ನಾವರ ಪಟ್ಟಣದ ದುರ್ಗಾಕೇರಿಯಲ್ಲಿ ವಿದ್ಯುತ್ ಶಾಕ್ ತಗುಲಿ ಮಹಿಳೆಯೊರ್ವಳು ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಮೃತ ಮಹಿಳೆ ಪಟ್ಟಣದ ದುರ್ಗಾಕೇರಿ ನಿವಾಸಿ ನಾಗರತ್ನ ಮಂಜುನಾಥ ಶೇಟ್ ಎಂದು ಗುರುತಿಸಲಾಗಿದೆ.ಮುಂಜಾನೆ 05-45 ರ ವೇಳೆಗೆ ತಾವು ವಾಸವಿರುವ ಮನೆಯ ಹಿಂದಿನ ಬಾವಿಯ ಪಂಪ್ ಸೆಟ್ ನ್ನು ಆನ್ ಮಾಡಿ, ಪಾತ್ರೆಯನ್ನು ತೊಳೆಯಲೆಂದು ನಡೆದುಕೊಂಡು ಹೋಗುತ್ತಿದ್ದಾಗ ನೆಲವು ಪಾಚಿಕಟ್ಟಿದ್ದರಿಂದ ಕಾಲುಜಾರಿದ್ದಾರೆ ಎನ್ನಲಾಗಿದೆ.
ಈ ವೇಳೆ ಪಂಪ್ ಸೆಟ್ ಗೆ ಅಳವಡಿಸಿದ ವಿದ್ಯುತ ತಂತಿ ಸ್ಪರ್ಶವಾಗಿ ನೆಲಕ್ಕೆ ಬಿದ್ದು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಚಿಕಿತ್ಸೆಗಾಗಿ ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯದಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಈ ಕುರಿತು ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



