
ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರ ಮೇಲೆ ಪ್ರತ್ಯೇಕ ಪ್ರಕರಣ ದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುರ್ಡೇಶ್ವರದ ಎಡ ಬದಿಯ ಬೀಚ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ಬೆಂಗಳೂರು ಕಾಮಾಕ್ಷಿ ಪಾಳ್ಯದ ಸಾ||ರಂಗನಾಥಪುರ ಮೂಲದ ಆರೋಪಿ ರಾಘು ಎಮ್, ( 27) ಪೊಲೀಸರು ವಶಕ್ಕೆ ಪಡೆದಿದ್ದು ಹಾಗೂ ಇನ್ನೊಂದು ಪ್ರಕರಣದಲ್ಲಿ ಮುರ್ಡೇಶ್ವರದ ಬಸ್ತಿಮಕ್ಕಿ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ಬೆಂಗಳೂರು ಮೂಲದ ಕಾಮಾಕ್ಷಿ ಪಾಳ್ಯ, ಅಮ್ಮ ಮಹೇಶ್ವರಿ ದೇವಸ್ಥಾನ ರಸ್ತೆಯ ಆರೋಪಿ ಆರ್ ಸಂತೋಷ (28) ಪೊಲೀಸರು ವಶಕ್ಕೆ ಪಡೆದಿದ್ದು ಈ ಇಬ್ಬರು ಆರೋಪಿಗಳನ್ನು ಮುರ್ಡೇಶ್ವರ ಠಾಣೆಯ ಪಿ.ಎಸ್.ಐ ಹನುಮಂತ ಬಿರಾದಾರ
ಸಿಬ್ಬಂಧಿಗಳ ಜೊತೆಯಲ್ಲಿ ವಶಕ್ಕೆ ಪಡೆದಿದ್ದು, ಗಾಂಜಾ ಸೇವನೆ ಮಾಡಿರುವ ಬಗ್ಗೆ ಆರೋಪಿ ಗಳನ್ನು ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ವೈದ್ಯಕೀಯ ವರದಿಯಲ್ಲಿ ಈ ಇಬ್ಬರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು (ಪಾಸಿಟಿವ್) ದೃಢಪಟ್ಟಿದೆ.
ಈ ಬಗ್ಗೆ ಮುರ್ಡೇಶ್ವರ ಠಾಣೆ ಪಿ.ಎಸ್ ಐ ಹನುಮಂತ ಬಿರಾದಾರ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

