
ಉತ್ತರ ಕನ್ನಡ ಜಿಲ್ಲೆಯ ಕಾರವಾರ ದಲ್ಲಿ ಅಬಕಾರಿ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಅಕ್ರಮವಾಗಿ ಗೋವಾ ದಿಂದ ಕರ್ನಾಟಕದೆಡೆ ಗೋವಾ ಮದ್ಯ ಸಾಗಾಟ ಮಾಡುತಿದ್ದ ಗೋವಾ ಮದ್ಯ ಹಾಗೂ ವಾಹನ ವಶಕ್ಕೆ ಪಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅಬಕಾರಿ ಇಲಾಖೆ ಡಿ.ವೈ ಎಸ್.ಪಿ ರಮೇಶ್ ಭಜಂತ್ರಿ ರವರು , ಮಂಗಳೂರು ಕೇಂದ್ರ ಕಚೇರಿಯಿಂದ ಗಡಿಯಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಯಲು ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕಾರವಾರ ತಾಲೂಕಿನ ಮಾಜಾಳಿ ಗಡಿ ಬಳಿಯ ಮಂಗಿನಿ ,ಮುಡುಗೆರಿ ,ಸಿಮೆಂಟ್ ಪ್ಯಾಕ್ಟರಿ, ಸೈಲ್ ಕಾಲೇಜು ಭಾಗದಲ್ಲಿ ತಂಡ ಕಟ್ಟಿಕೊಂಡು ತಪಾಸಣೆ ನಡೆಸಿದ್ದು ನಾಲ್ಕು ಪ್ರಕರಣವನ್ನು ದಾಖಲಿಸಿದ್ದೇವೆ.7 ಲಕ್ಷಕ್ಕೂ ಹೆಚ್ಚು ಮೌಲ್ಯದ ಗೋವಾ ಮದ್ಯ ಹಾಗೂ ನಾಲ್ಕು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.640 ಲೀಟರ್ ಗೋವಾ ಮದ್ಯ ,72 ಲೀಟರ್ ಬಿಯರ್ ಕ್ಯಾನ್ ಗಳು ವಶಕ್ಕೆ ಪಡೆಯಲಾಗಿದೆ.
ನಾಲ್ಕು ಲಕ್ಷದ ಮೂವತ್ತೇಳು ಸಾವಿರ ಗೋವಾ ಮದ್ಯ , ಎರಡು ಲಕ್ಷದ ಎಂಬತ್ತು ಸಾವಿರ ಮೌಲ್ಯದ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದೇವೆ ,ಆರೋಪಿಗಳು ಪರಾರಿಯಾಗಿದ್ದಾರೆ.ಒಟ್ಟು ಏಳು ಲಕ್ಷದ ಹದಿನೇಳು ಸಾವಿರ ಮೌಲ್ಯದ ಗೋವಾ ಮದ್ಯ ಹಾಗೂ ವಾಹನ ಜಪ್ತಿ ಪಡಿಸಿಕೊಂಡು ವಾಹನ ನೊಂದಣಿ ಸಂಖ್ಯೆ ಆಧರಿಸಿ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದರು.


