ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಮುಕ : ಮಹಿಳೆ ದೂರಿಗೆ ಪೋಲಿಸರ ಸ್ಪಂದನೆ

ಹೊನ್ನಾವರ ಜೂ28 :  ಮಹಿಳೆಯೊರ್ವಳು ಸ್ನಾನ ಮಾಡುತ್ತಿದ್ದ ವೇಳೆ ಕಾಮುಕ ಯುವಕನೊರ್ವ ಇಣುಕಿ ನೋಡಿದ ಬಗ್ಗೆ ನೊಂದ ಮಹಿಳೆ ಮಂಕಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕಾಮುಕ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

ಆರೋಪಿತ ವ್ಯಕ್ತಿಯನ್ನು ತಾಲೂಕಿನ ನಾಜಗಾರ ನಿವಾಸಿ ಯೊಗೇಶ ಗಣಪಯ್ಯ ಗೌಡ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಮಹಿಳೆಯ ಕೊಟ್ಟಿಗೆ ಮನೆಗೆ ತಾಗಿ ಇರುವ ಬಚ್ಚಲು ಕೋಣೆಗೆ ಅತೀಕ್ರಮ ಪ್ರವೇಶ ಮಾಡಿದ್ದಾನೆ. ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ಕೊಟ್ಟಿಗೆ ಕೊಣೆಯ ಬಾಗಿಲನ್ನು ತೆರೆದು ಇಣುಕಿ ನೋಡಿ ಮಾನಕ್ಕೆ ಕುಂದುಂಟು ಮಾಡಿದ್ದನ್ನು ಕಂಡು ಮಹಿಳೆ ಕೂಗಿಕೊಂಡಿದ್ದಾಳೆ.

ಕೂಡಲೇ ಆರೋಪಿತನು ಓಡಿ ಹೋಗಿ ತನ್ನ ಮನೆಯ ಒಳಗೆ ಹೊಕ್ಕಿಕೊಂಡಿದ್ದಾನೆ. ಆರೋಪಿ ಯೋಗೇಶ ಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಕೋರಿ ದೂರು‌ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಮಂಕಿ ಪೊಲೀಸರು ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಮುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಂಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..