ಗುಡ್ ನೈಟ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಸಾವು

ಹೊನ್ನಾವರ: ತಾಲೂಕಿನ ಕಾವೂರಿನಲ್ಲಿ ಸೊಳ್ಳೆ ನಿವಾರಣೆಗೆ ಬಳಸುವ ಗುಡ್‌ನೈಟ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಆರವ ಮಹೇಶ ನಾಯ್ಕ (2) ಮೃತಪಟ್ಟ ಬಾಲಕ. ಘಟನೆ ನಡೆದ ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಬಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ. ಬಾಲಕನನ್ನು ಕಳೆದುಕೊಂಡ ತಂದೆ, ತಾಯಿ, ಬಂಧುಗಳ ದುಃಖ ಮಗಿಲು ಮುಟ್ಟಿದೆ.