
ಹೊನ್ನಾವರ:- ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಗಾನ ಕಲಾಮಂದಿರದಲ್ಲಿ ಸುಮಾರು 30 ನಾಗರಿಕರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.

ರಾಷ್ಟ್ರಮಟ್ಟದ ಯೋಗ ತರಬೇತಿದಾರರಾದ ರಾಜೇಶ್ ಅವರು, ಯೋಗದ ಬಗ್ಗೆ ಮಾರ್ಗದರ್ಶನ ನೀಡಿ ಯೋಗದ ಮಹತ್ವದೊಂದಿಗೆ ಓಂಕಾರ, ಪ್ರಾರ್ಥನೆ, ತಿಥಿಲೀಕರಣ ,ಸೂರ್ಯ ನಮಸ್ಕಾರ, ಯೋಗಾಸನಗಳು, ಪ್ರಾಣಾಯಾಮ ಹಾಗೂ ಮುದ್ರೆಗಳ ಬಗ್ಗೆ ಸವಿಸ್ತಾರವಾಗಿ ಮನ ಮುಟ್ಟುವಂತೆ ಮಾರ್ಗದರ್ಶನ ನೀಡಿದ್ರು. ನಂತರ ಎಲ್ಲ ನಾಗರಿಕರಿಗೆ ಯೋಗಾಭ್ಯಾಸ ಮಾಡಿಸಿದರು.
ಇನ್ನು ಕಾರ್ಯಕ್ರಮವು ಶ್ರೀ ನರಸಿಂಹ ಪಂಡಿತ್ ಹಾಗೂ ಎಸ್ ಹೆಚ್ ಗೌಡ ಇವರ ಸಂಘಟನೆಯ ಉಪಸ್ಥಿತಿಯಲ್ಲಿ ನೆರವೇರಿತು.

