ಹೊನ್ನಾವರ ಅ. ೦8 : ಇಂದು ಕಾಸರಕೋಡಿನಲ್ಲಿ ಅಪ್ಸರಕೊಂಡ ರಸ್ತೆಯ ತಿರುವಿನಲ್ಲಿ ದುರ್ಗಾಂಬಾ ಹೊಟೇಲ್ ದೇವತಾ ಪೂಜೆಯೊಂದಿಗೆ ಉದ್ಘಾಟನೆಯಾಯಿತು. ಎಲ್ಲ ಕಾಲದಲ್ಲೂ ಏಕಪ್ರಕಾರ ದರದಲ್ಲಿ ಊಟೋಪಚಾರ ಮತ್ತು ವಸತಿ ಒದಗಿಸುತ್ತಿದ್ದೇವೆ. ಹೊನ್ನಾವರಕ್ಕೆ ಬರುವ ಪ್ರವಾಸಿಗರ ಮೆಚ್ಚುಗೆ ಗಳಿಸಿದೆ ಎಂದು ಇದರ ಮಾಲಕ ಮೋಹನ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು. ಕಾರ್ಮಿಕನಾಗಿ ಜೀವನ ಆರಂಭಿಸಿದ ಇವರು ಮಹಾರಾಷ್ಟçದ ಪುಣೆ ಮತ್ತು ಸಾಂಗ್ಲಿಗಳಲ್ಲಿ ಹೊಟೇಲ್ ಉದ್ಯಮಿಯಾಗಿರುವ ಇವರು ಊರಿನ ನೂರಾರು ಜನರಿಗೆ ಅಲ್ಲಿ ಉದ್ಯೋಗ ಕೊಟ್ಟಿದ್ದು ದೂರ ಬರಲಾರದ ಯುವಕರಿಗೆ ಉದ್ಯೋಗ ಒದಗಿಸಲು ಊರಿನ ಸಮೀಪ ಹೊಟೇಲ್ ಆರಂಭಿಸಿರುವುದಾಗಿ ಹೇಳಿದ್ದಾರೆ. ಚತುಷ್ಪಥಕ್ಕೆ ಹೊಂದಿಕೊಂಡಿರುವ ಈ ಹೊಟೇಲ್ ಪ್ರವಾಸಿಗರಿಗೆ ಉಪಕಾರಿಯಾಗಿದೆ. ಮೋಹನ ನಾಯ್ಕ ಮೂಲತಃ ಹೊನ್ನಾವರ ಮಂಕಿಯವರು.