ಯೋಗಾಸನ ಸ್ಪರ್ಧೆಯಲ್ಲಿ ಪಿ.ಎಂ.ಶ್ರೀ ಸ.ಮಾ.ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಸಾಧನೆ

ಹೊನ್ನಾವರ, ಜುಲೈ -29 : ಯುವ ಸಬಲೀಕರಣ ಇಲಾಖೆ, ಯೋಗಾಸನ ಭಾರತ ಇವರ ಸಂಯುಕ್ತ ಆಶ್ರಯದಲ್ಲಿ, 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ 14 /07/ 2024 ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಂತರ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹೊನ್ನಾವರ ತಾಲೂಕಿನ ಹಳದಿಪುರದ ಪಿ ಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಸಾಧನೆ ಮಾಡಿದ್ದಾರೆ. ರಜತ್ ಮಂಜುನಾಥ್ ನಾಯ್ಕ್, ವಿದ್ಯಾಶ್ರೀ ಈಶ್ವರ್ ಗೌಡ, ಶ್ರೀನಿಧಿ ಸತೀಶ್ ರೇವಣಕರ್, ಸಮಿಕ ಚಂದ್ರಕಾಂತ್ ಹರಿಕಾಂತ್ A+ ನಲ್ಲಿ ವಿಜೇತರಾಗಿದ್ದಾರೆ.

ಮುಂದಿನ ವಿದ್ಯಾರ್ಥಿಗಳು ಟಾಪ್ ಟೆನ್ A+ ಶ್ರೇಣಿಯಲ್ಲಿ ಆಯ್ಕೆಯಾಗಿರುತ್ತಾರೆ. ಸಹರ್ಷ ಮಹೇಶ ಹರಿಕಾಂತ್ ಟ್ರೆಡಿಷನಲ್ ಯೋಗಾಸನ ಸ್ಪರ್ಧೆ ನಾಲ್ಕನೇ ಸ್ಥಾನ, ಐಚ್ಛಿಕ ಯೋಗಾಸನ ಸ್ಪರ್ಧೆ ಎಂಟನೇ ಸ್ಥಾನ, ನಿಕಿತಾ ನಾಗೇಶ್ ಹರಿಕಾಂತ್ ಇವಳು ಟ್ರೆಡಿಷನಲ್ ಯೋಗ ಸ್ಪರ್ಧೆಯಲ್ಲಿ ಹತ್ತನೇ ಸ್ಥಾನ, ಅನಂತ ಮಂಜುನಾಥ ಗೌಡ ಟ್ರೆಡಿಷನಲ್ ಯೋಗಾಸನ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆಯುವ ಮೂಲಕ ಶಾಲೆಗೂ ಗ್ರಾಮಕ್ಕೂ ತಾಲೂಕಿಗೂ ಕೀರ್ತಿ ತಂದಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಪಕರು, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಕ್ಲಸ್ಟರ್ ಸಿಆರ್‌ಪಿಗಳು ಶಾಲಾ ಸಿಬ್ಬಂದಿಯವರೆಲ್ಲರೂ ಈ ಮಕ್ಕಳಿಗೆ ಮತ್ತು ಮಾರ್ಗದರ್ಶಿ ಶಿಕ್ಷಕಿಯರಿಗೆ ಶುಭ ಹಾರೈಸಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗಾಗಿ ಶ್ರಮಿಸಿದಂತ ಶಾಲಾ ಮುಖ್ಯೋಧ್ಯಾಪಕರು ,ದೈಹಿಕ ಶಿಕ್ಷಕರು, ಸಹಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.