ಬಾಗಲಕೋಟೆ, ಆಗಸ್ಟ್ 8: ಪಶ್ಚಿಮಬಂಗಾಳದಲ್ಲಿ ಬಾಗಲಕೋಟೆ ಮೂಲದ ಯೋಧ ಹುತಾತ್ಮವಾಗಿರುವಂತಹ ಘಟನೆ ನಿನ್ನೆ ನಡೆದಿದೆ. ಉಮೇಶ್ ದಬಗಲ್(33) ಹುತಾತ್ಮವಾದ ಬಿಎಸ್‌ಎಫ್ ಯೋಧ. ಗುಂಡು ತಗುಲಿ ಉಮೇಶ್ ದಬಗಲ್ ಹುತಾತ್ಮರಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದ ನಿವಾಸಿ. 13 ವರ್ಷದಿಂದ ಬಿಎಸ್‌ಎಫ್‌ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು. ನಾಳೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತಲುಪಲಿದೆ.