ಚಿಕ್ಕಮಗಳೂರು, ಜು.04: ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರಿ ಮಳೆ ಆಗುತ್ತಿದ್ದು, ಮಳೆಯಿಂದಾಗಿ ‘ಸಿರಿಮನೆ ಜಲಪಾತ’ ಮತ್ತೆ ಜೀವ ಕಳೆ ಪಡೆದಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಸಿರಿಮನೆ ಜಲಪಾತ, ಇದೀಗ ಹಾಲ್ನೊರೆಯಂತೆ ಉಕ್ಕಿ ಹರಿಯುತ್ತಿದೆ. ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ 15 ದಿನಗಳಿಂದ ನಿರಂತ ಮಳೆಯಾಗಿದೆ. ಹೀಗಾಗಿ ಉತ್ತಮ ಮಳೆಯಿಂದಾಗಿ ಜಲಪಾತದ ನೀರಿನ ಮಟ್ಟ ಏರಿಕೆ ಆಗಿದ್ದು, ನೋಡುಗರನ್ನು ಒಮ್ಮೆ ಮಂತ್ರಮುಗ್ದರನ್ನಾಗಿಸುತ್ತದೆ. ಈ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದು, ಜಲಪಾತದ ನೀರಿನಲ್ಲಿ ಆಟವಾಡಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ದಿನನಿತ್ಯದ ಜಂಜಾಟದಲ್ಲಿ ಬಳಲಿದ್ದವರು, ಇಲ್ಲಿ ಬಂದು ಕೊಂಚ ರಿಲ್ಯಾಕ್ಷ್ ಆಗುತ್ತಿದ್ದಾರೆ.