ಕೆಜಿಎಫ್​ ನಗರಸಭೆ ಅಧಿಕಾರಿಗಳಿಂದ ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಕ್ಯಾನ್ಸರ್​ ಕಾರಕ ಕಲರ್ ಬಳಸಿ ತಯಾರು ಮಾಡಿದ್ದ ಸಿಹಿ ತಿಂಡಿಗಳು ವಶಕ್ಕೆ

ಕೋಲಾರ, ಜು.04: ಕೆಜಿಎಫ್​ ನಗರಸಭೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ಇಂದು(ಗುರುವಾರ) ಕೆಜಿಎಫ್​ ನಗರಸಭೆ ವ್ಯಾಪ್ತಿಯಲ್ಲಿ ಸ್ವೀಟ್​​ ಅಂಗಡಿಗಳ ಮೇಲೆ ನಗರಸಭೆ ಪೌರಾಯುಕ್ತ ಪವನ್​ ಕುಮಾರ್​ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಕ್ಯಾನ್ಸರ್​ ಕಾರಕ ಕಲರ್ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ತಿಂಡಿಗಳನ್ನು ವಶಕ್ಕೆ ಪಡೆಯಲಾಯಿತು. ಜೊತೆಗೆ ಆಹಾರ ಸುರಕ್ಷತೆ ನಿಯಮ ಪಾಲಿಸದೆ ಸ್ವೀಟ್​ ತಯಾರು ಮಾಡುತ್ತಿದ್ದ ಅಂಗಡಿಗಳಿಗೆ ನೋಟೀಸ್​ ನೀಡಿ ದಂಡ ವಿಧಿಸಲಾಗಿದೆ. ಇನ್ನು ಅಧಿಕಾರಿಗಳು, ಕಲರ್ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಕಸದ ಲಾರಿಗೆ ತುಂಬಿಸಿದ್ದಾರೆ.

ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು. ಜೊತೆಗೆ ಕಲರ್‌‌ ಬಳಸುವ ಎಲ್ಲಾ ಗೋಬಿ ಮಂಚೂರಿ, ಕಬಾಬ್ ಸೆಂಟರ್​ಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶದಂತೆ ನಿಷೇಧಿತ ಕಲರ್ ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಸ್ವೀಟ್​​ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.