ಗೆರಸೊಪ್ಪದಲ್ಲಿ ಸಚಿವರಿಂದ ಕೋಟಿ ಶಿವಲಿಂಗ ದರ್ಶನ


Honnavara :ಕರ್ನಾಟಕ ಸರ್ಕಾರದ ಮೀನುಗಾರಿಕೆ ಹಾಗೂ ಬಂದರು.ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ ಎಸ್ ವೈದ್ಯ ಅವರು ಇತ್ತೀಚೆಗೆ ಗೆರಸೊಪ್ಪದಲ್ಲಿ ಕೋಟಿ ಶಿವಲಿಂಗ ದರ್ಶನ ಮಾಡಿದರು.

ಗೆರಸೊಪ್ಪ ಪವಿತ್ರವನದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ವಿಶ್ವೇಶ್ವರ ಹಳೆಮನೆ ಹಾಗೂ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಕುಸುಮಕ್ಕ ಅವರು ಮಾನ್ಯ ಸಚಿವರಿಗೆ ಕೋಟಿ ಶಿವಲಿಂಗದ ಮಹತ್ವವನ್ನು ವಿವರಿಸಿದರು. . ಈ ಸಂದರ್ಭದಲ್ಲಿ ಸಚಿವರು ಕೋಟಿ ಶಿವ. ಲಿಂಗದ ಯೋಚನೆ – ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು . ಬ್ರಹ್ಮಾಕುಮಾರಿ ಮಹಾದೇವಕ್ಕ ಅವರು ಚಿತ್ರಪ್ರದರ್ಶನದ ವಿವರಣೆ ನೀಡಿದರು.
ಶ್ರೀ ಗುತ್ತಿ ಕನ್ನಿಕಾಪರಮೇಶ್ವರಿ ದೇವಸ್ಥಾನ ಉಪ್ಪಿನಗೋಳಿ ಜಾತ್ರೆ ಪ್ರಯುಕ್ತ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು . ಸಾವಿರಾರು ಭಕ್ತರು ಈ ವಿಶೇಷ ಪ್ರದರ್ಶನವನ್ನು ವೀಕ್ಷಣೆ ಮಾಡಿದರು.