
ಹೊನ್ನಾವರ ಜೂ. ೨೨: ಸೂರ್ಯಕಾಂತ ಸಾರಂಗ ಅವರು ಅಧ್ಯಕ್ಷರಾದ ಮೇಲೆ ಸತತ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವಧಿಯ ಕೊನೆಯ ದಿನ ನಗರದ ಇಬ್ಬರು ಮಹಿಳೆಯರಿಗೆ ಉಚಿತವಾಗಿ ಪಿಂಕ್ ರಿಕ್ಷಾ ವಿತರಿಸಲು ನಿರ್ಧರಿಸಿದಂತೆ ದಿ. ೨೪ ರಂದು ಬೆಳಿಗ್ಗೆ ೧೦-೪೫ ಕ್ಕೆ ಜಿಲ್ಲಾಧಿಕಾರಿ ಶ್ರೀಮತಿ ಲಕ್ಷ್ಮಿಪ್ರಿಯಾ ರಿಕ್ಷಾಗಳನ್ನು ವಿತರಿಸಲಿದ್ದಾರೆ. ರೋಟರಿ ಹಿರಿಯ ಸದಸ್ಯರಾದ ಜಯಶ್ರೀ ಕಾಮತ್, ರಾಘವೇಂದ್ರ ಪ್ರಭು, ಅತಿಥಿಗಳಾಗಿ ಪಾಲ್ಗೊಳ್ಳುವರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಘವ ಬಾಳೇರಿ ಅಧ್ಯಕ್ಷತೆ ವಹಿಸುವರು..
ಕುಟುಂಬ ನಿರ್ವಹಣೆ ಮಾಡಲಾಗದೇ ಕಷ್ಟದಲ್ಲಿರುವ ಇಬ್ಬರು ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ರಿಕ್ಷಾ ಚಾಲನೆಯಲ್ಲಿ ಈಗಾಗಲೇ ತರಬೇತಿ ನೀಡಲಾಗಿದೆ. ರಿಕ್ಷಾದ ಭದ್ರತೆಯ ದೃಷ್ಟಿಯಿಂದ ಒಪ್ಪಂದ ಮಾಡಿಕೊಳ್ಳಲಾಗಿದ್ದು ತಲಾ ೧ ಲಕ್ಷ ರೂ. ಇವರಿಂದ ಠೇವಣಿ ಪಡೆದು ಬ್ಯಾಂಕಿನಲ್ಲಿ ಇಡಲಾಗಿದೆ. ೫ ವರ್ಷ ಅಥವಾ ೩ ವರ್ಷಗಳಿಗೆ ಇವರು ರಿಕ್ಷಾವನ್ನು ಸದುಪಯೋಗ ಮಾಡಿಕೊಂಡಿದ್ದನ್ನು ಅಧ್ಯಯನ ಮಾಡಿ ಬಡ್ಡಿ ಸಹಿತ ೧ ಲಕ್ಷ ರೂ.ಗಳನ್ನು ಮಹಿಳೆಯರಿಗೆ ವಾಪಸ್ ನೀಡಲಾಗುವುದು. ೫ ಲಕ್ಷ ರೂ. ಬೆಲೆಯ ಈ ಇಲೆಕ್ಟಿçಕ್ ರಿಕ್ಷಾವನ್ನು ಇಂಧನದ ವೆಚ್ಚವಿಲ್ಲದೇ ಚಾರ್ಜ್ ಮಾಡಿ ಬಳಸಿ ಆದಾಯ ಗಳಿಸಬಹುದು. ಬಸ್‌ಸ್ಟಾö್ಯಂಡ್‌ನ ರಿಕ್ಷಾಸ್ಟೆಂಡ್‌ನಲ್ಲಿ ಇವರಿಗೆ ಅವಕಾಶ ಕಲ್ಪಿಸಿಕೊಡಲು ಜಿಲ್ಲಾಧಿಕಾರಿಗಳಿಗೆ, ಸಾರಿಗೆ ಅಧಿಕಾರಿಗಳಿಗೆ ವಿನಂತಿಸಲಾಗಿದೆ. ಕಷ್ಟದಲ್ಲಿರುವ ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸುವ ಮುಖಾಂತರ ಸ್ವಾಭಿಮಾನದ ಬದುಕು ನಡೆಸಲು ಈ ಅನುಕರಣೀಯ ಯೋಜನೆ ಸಹಾಯಕವಾಗಲಿದೆ. ರೋಟರಿ ಸಭಾಭವನದಲ್ಲಿ ಅಂದು ಪಿಂಕ್ ರಿಕ್ಷಾ ವಿತರಣೆ ಕಾರ್ಯಕ್ರಮ ನಡೆಯಲಿದೆ.

