ಆ.20 ರಂದು ಮುಡಗೇರಿಯಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ

ಕಾರವಾರ: ತಾಲೂಕಿನ ಸಾವಂತವಾಡ ಹೋಬಳಿಯ ಮುಡಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಂಗಡಿ ಗ್ರಾಮದ ಶಿವನಾಥ ದೇವಸ್ಥಾನ ಸಭಾಭವನದಲ್ಲಿ ಆ. 20 ರಂದು ಕಂದಾಯ ಹಾಗೂ ಇತರೇ ಇಲಾಖೆ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಸಾರ್ವಜನಿಕರು ತಮ್ಮ ಕುಂದು ಕೊರತೆ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಗ್ರಾಮ ವಾಸ್ತವ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಕಾರವಾರ ತಹಶೀಲ್ದಾರ ವಿ. ಎಫ್. ನರೋನ್ಹಾ ತಿಳಿಸಿದ್ದಾರೆ