ರಾಷ್ಟ್ರೀಯ ಭದ್ರತೆಗೆ ಧಕ್ಕೆ: 8 ಯೂಟ್ಯೂಬ್ ಚಾನೆಲ್ ಬ್ಯಾನ್

ನವದೆಹಲಿ: ಸುಳ್ಳು ಮಾಹಿತಿ ಪ್ರಸಾರ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡಿದ ಹಿನ್ನೆಲೆಯಲ್ಲಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬಾರತದ 7 ಹಾಗೂ ಪಾಕಿಸ್ತಾನ ಮೂಲದ 1 ಯೂಟ್ಯೂಬ್ ಚಾನೆಲ್ ಗಳನ್ನು ನಿರ್ಬಂಧಿಸಿದೆ. 2021 ರ ಐಟಿ ನಿಯಮಗಳು ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ 8 ಯೂಟ್ಯೂಬ್ ಚಾನೆಲ್ ಗಳನ್ನು ಸರ್ಕಾರ ಬ್ಯಾನ್ ಮಾಡಿ ಕ್ರಮ ಕೈಗೊಂಡಿದೆ. ತಪ್ಪು ಮಾಹಿತಿಗಳನ್ನು ಹರಡುವುದಲ್ಲದೇ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಬ್ಯಾನ್ ಮಾಡಲಾದ ಯೂಟ್ಯೂಬ್ ಚಾನೆಲ್‌ಗಳು 114 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ ಮತ್ತು 85 ಲಕ್ಷ 73 ಸಾವಿರ ಚಂದಾದಾರರು ಹೊಂದಿದೆ. ಯೂಟ್ಯೂಬ್‌ನಲ್ಲಿ ನಿರ್ಬಂಧಿಸಲಾದ ಚಾನೆಲ್‌ಗಳಿಂದ ನಕಲಿ ಹಾಗೂ ಭಾರತ ವಿರೋಧಿ ವಿಷಯವನ್ನು ಪ್ರಸಾರ ಮಾಡಿ ಹಣಗಳಿಸಲಾಗುತ್ತಿದೆ ಎಂದು ಹೇಳಲಾಗಿದೆ.