ಗೂಡ್ಸ್ ಹಾಗೂ ಪ್ಯಾಸೆಂಜರ್ ರೈಲಿನ ನಡುವೆ ಡಿಕ್ಕಿ: 50 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಮಹಾರಾಷ್ಟ್ರ: ಗೂಡ್ಸ್ ರೈಲು ಹಾಗೂ ಪ್ಯಾಸೆಂಜರ್ ರೈಲಿನ ನಡುವೆ ಡಿಕ್ಕಿ ಸಂಭವಿಸಿ 3 ಭೋಗಿಗಳು ಹಳಿತಪ್ಪಿ 50 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಗೊಂಡಿಯಾದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಬುಧವಾರ ಬೆಳಗ್ಗೆ 2.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ರೈಲಿನ ಎಸ್ 3 ಬೋಗಿಗಳು ಹಳಿತಪ್ಪಿವೆ. ರೈಲು ಛತ್ತೀಸ್‌ ಗಢದ ಬಿಲಾಸ್‌ ಪುರದಿಂದ ರಾಜಸ್ಥಾನದ ಜೋಧ್‌ ಪುರಕ್ಕೆ ತೆರಳುತ್ತಿತ್ತು. ಗಾಯಗೊಂಡ ಪ್ರಯಾಣಿಕರನ್ನು ಗೊಂಡಿಯಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.