ಅಮೃತಮಹೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ನಿಂದ ವಿವಿಧ ಕಾರ್ಯಕ್ರಮಗಳು

ದಾಂಡೇಲಿ: ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾಗೂ ದಾಂಡೇಲಿ ತಾಲೂಕು ಘಟಕ, ಗೆಳೆಯರ ಬಳಗ, ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಸಂಘ ಹಾಗೂ ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಆ. 18 ರಂದು ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ‘ದೇಶದ ಸ್ವಾತಂತ್ರ್ಯಕ್ಕೆ ರಕ್ತಚೆಲ್ಲಿದವರಿಗಾಗಿ ರಕ್ತದಾನ, ರಾಷ್ಟ್ರಪ್ರೀತಿಯ ಕಾವ್ಯ ಗಾಯನ, ಸ್ವಾತಂತ್ರ್ಯ ಸೌಹಾರ್ದತೆಯ ಕವನ ವಾಚನ’ ಕಾರ್ಯಕ್ರಮ ನಡೆಯಲಿದೆ.

ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣ, ಬಲಿದಾನ ಗೈದವರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ದೇಶಪ್ರೇಮಿಗಳು ಆಗಮಿಸಿ ರಕ್ತದಾನ ಮಾಡುವುದರ ಜೊತೆಗೆ ಕಾವ್ಯಗಾಯನ, ಕವನ ವಾಚನದಲ್ಲೂ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.